ADVERTISEMENT

ಮಧ್ಯಾಹ್ನದ ಊಟ ಸೇವಿಸಲು ವಿದ್ಯಾರ್ಥಿಗಳ ವಿರೋಧ: ಅಡುಗೆ ಕೆಲಸದಿಂದ ದಲಿತ ಮಹಿಳೆ ವಜಾ

ಪಿಟಿಐ
Published 23 ಡಿಸೆಂಬರ್ 2021, 14:19 IST
Last Updated 23 ಡಿಸೆಂಬರ್ 2021, 14:19 IST
ಐಸ್ಟಾಕ್ ಚಿತ್ರ
ಐಸ್ಟಾಕ್ ಚಿತ್ರ   

ಡೆಹರಾಡೂನ್: ದಲಿತ ಮಹಿಳೆ ತಯಾರಿಸಿದ ಮಧ್ಯಾಹ್ನದ ಊಟವನ್ನು ಸೇವಿಸಲು ಮೇಲ್ಜಾತಿಯ ವಿದ್ಯಾರ್ಥಿಗಳು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆಯನ್ನು ಕೆಲಸದಿಂದ ವಜಾ ಮಾಡಿರುವ ಘಟನೆ ಉತ್ತಾರಾಖಂಡ ರಾಜ್ಯದ ಚಂಪಾವತ್ ಜಿಲ್ಲೆಯ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ನಡೆದಿದೆ.

ಚಂಪಾವತ್ ಜಿಲ್ಲೆಯ ಸುಖೀಧಂಗ್‌ನ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಈ ತಿಂಗಳ ಆರಂಭದಲ್ಲಿ ದಲಿತ ಮಹಿಳೆಯನ್ನು ‘ಭೋಜನ ಮಾತೆ’ಯಾಗಿ ನೇಮಕ ಮಾಡಿದ ಬಳಿಕ, ಆಕೆ ತಯಾರಿಸಿದ ಊಟವನ್ನು ಸೇವಿಸಲು ವಿದ್ಯಾರ್ಥಿಗಳು ನಿರಾಕರಿಸಿದ್ದರು. ಮನೆಯಿಂದಲೇ ಊಟದ ಬಾಕ್ಸ್ ತರುತ್ತಿದ್ದರು. ಮೇಲ್ಜಾತಿಯ ಮಹಿಳೆ ಸಂದರ್ಶನದಲ್ಲಿ ಭಾಗವಹಿಸಿದ್ದರೂ ಸಹ ದಲಿತ ಮಹಿಳೆಯನ್ನು ‘ಭೋಜನ ಮಾತೆ’ಯಾಗಿ ನೇಮಕ ಮಾಡಿದ್ದೇಕೆ? ಎಂದು ವಿದ್ಯಾರ್ಥಿಗಳ ಪೋಷಕರೂ ವಿರೋಧ ವ್ಯಕ್ತಪಡಿಸಿದ್ದರು.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿರುವ ಚಂಪಾಚತ್ ಜಿಲ್ಲೆಯ ಮುಖ್ಯ ಶಿಕ್ಷಣಾಧಿಕಾರಿ ಆರ್‌.ಸಿ. ಪುರೋಹಿತ್, ಆಕೆಯ ನೇಮಕಾತಿಯನ್ನು ರದ್ದು ಮಾಡಲಾಗಿದ್ದು, ನೇಮಕದ ವೇಳೆ ನಿಯಮಗಳ ಪಾಲನೆ ಆಗಿಲ್ಲ ಎಂದು ಹೇಳಿದ್ದಾರೆ.

‘ಆಕೆಯ ನೇಮಕಕ್ಕೆ ಉನ್ನತ ಅಧಿಕಾರಿಗಳು ಅನುಮೋದನೆ ನೀಡಿರಲಿಲ್ಲ. ಆದರೂ ಅವರನ್ನು ಭೋಜನ ಮಾತೆಯಾಗಿ ನೇಮಕ ಮಾಡಲಾಗಿತ್ತು’ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.