
ನವದೆಹಲಿ: ನಿಕೋಬಾರ್‌ಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೀಡಿರುವ ಆದೇಶವು, ಅಭಿವೃದ್ಧಿಯೊಂದನ್ನೇ ದೃಷ್ಟಿಯಲ್ಲಿ ಇಟ್ಟುಕೊಳ್ಳದೆ ಪರಿಸರದ ಮೇಲಾಗುವ ಪರಿಣಾಮದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿತ್ತು ಎಂದು ಕನ್ಸರ್ವೇಷನ್ ಆ್ಯಕ್ಷನ್ ಟ್ರಸ್ಟ್‌ನ (ಸಿಎಟಿ) ಕಾರ್ಯಕಾರಿ ಟ್ರಸ್ಟಿ ದೇಬಿ ಗೋಯೆಂಕಾ ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ₹81 ಸಾವಿರ ಕೋಟಿ ಮೊತ್ತದ ಗ್ರೇಟ್ ನಿಕೋಬಾರ್ ಮೆಗಾ ಇನ್‌ಫ್ರಾಸ್ಟ್ರಕ್ಚರ್ ಯೋಜನೆಗೆ ಅನುವು ಮಾಡಿಕೊಟ್ಟ ಕೆಲವೇ ದಿನಗಳ ನಂತರ ಈ ಹೇಳಿಕೆ ನೀಡಿದ್ದಾರೆ.
ಪರಿಸರ ರಕ್ಷಣೆಗಾಗಿಯೇ ರಚಿಸಲಾಗಿರುವ ಸ್ವಯಂ ಸೇವಾಸಂಸ್ಥೆ ಸಿಎಟಿ, ಆರಂಭದಲ್ಲಿ ಈ ದಾವೆಯ ಭಾಗವಾಗಿತ್ತು. ಎನ್‌ಜಿಟಿಗೂ ಮೊದಲು ಯೋಜನೆಗೆ ನೀಡಲಾಗಿದ್ದ ಪರಿಸರ ಅನುಮತಿಯನ್ನು 2022ರಲ್ಲಿ ಪ್ರಶ್ನಿಸಿತ್ತು. ಆಗ, ಯೋಜನೆಯ ಅನುಮೋದನೆಯಲ್ಲಿ ಹಸ್ತಕ್ಷೇಪ ಮಾಡಲು ನ್ಯಾಯಮಂಡಳಿ ನಿರಾಕರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.