ADVERTISEMENT

ನೆಬ್ರಸ್ಕಾ: ‘ಗಾಂಧೀಜಿ ಸ್ಮರಣಾ ದಿನ’ವಾಗಿ ಡಿ.6 ಆಚರಣೆ

ಪ್ರತಿವರ್ಷ ಡಿ. 6ರಂದು ಗಾಂಧಿ ಸ್ಮರಣಾರ್ಥ ದಿನ ಆಚರಣೆ

ಪಿಟಿಐ
Published 7 ಡಿಸೆಂಬರ್ 2024, 15:37 IST
Last Updated 7 ಡಿಸೆಂಬರ್ 2024, 15:37 IST
<div class="paragraphs"><p>ನೆಬ್ರಸ್ಕಾ&nbsp;ಗವರ್ನರ್‌ ಜೀಮ್‌ ಪಿಲೆನ್‌ ಅವರು ಶುಕ್ರವಾರ&nbsp;ಲಿಂಕನ್‌ನಲ್ಲಿರುವ ಗವರ್ನರ್ ಕಚೇರಿ ಆವರಣದಲ್ಲಿ ಮಹಾತ್ಮ ಗಾಂಧಿಯವರ ಪುತ್ಥಳಿ ಅನಾವರಣಗೊಳಿಸಿದರು&nbsp; ಪಿಟಿಐ ಚಿತ್ರ</p></div>

ನೆಬ್ರಸ್ಕಾ ಗವರ್ನರ್‌ ಜೀಮ್‌ ಪಿಲೆನ್‌ ಅವರು ಶುಕ್ರವಾರ ಲಿಂಕನ್‌ನಲ್ಲಿರುವ ಗವರ್ನರ್ ಕಚೇರಿ ಆವರಣದಲ್ಲಿ ಮಹಾತ್ಮ ಗಾಂಧಿಯವರ ಪುತ್ಥಳಿ ಅನಾವರಣಗೊಳಿಸಿದರು  ಪಿಟಿಐ ಚಿತ್ರ

   

ನ್ಯೂಯಾರ್ಕ್‌: (ಪಿಟಿಐ): ಅಮೆರಿಕದ ನೆಬ್ರಸ್ಕಾದ ರಾಜಧಾನಿಯಲ್ಲಿ ಮಹಾತ್ಮ ಗಾಂಧಿ ಅವರ ಪುತ್ಥಳಿ ಅನಾವರಣ ಮಾಡಲಾಗಿದೆ. ಡಿ.6 ಅನ್ನು ‘ಗಾಂಧಿ ಸ್ಮರಣಾರ್ಥ ದಿನ’ವಾಗಿ ಆಚರಿಸಲು ನಿರ್ಧರಿಸಲಾಗಿದೆ. 

ನೆಬ್ರಸ್ಕಾ ಗವರ್ನರ್‌ ಜೀಮ್‌ ಪಿಲೆನ್‌ ಅವರು ಶುಕ್ರವಾರ ರಾಜಧಾನಿ ಲಿಂಕನ್‌ನ ಗವರ್ನರ್ ಕಚೇರಿ ಆವರಣದಲ್ಲಿ ಗಾಂಧೀಜಿ ಅವರ ಪುತ್ಥಳಿ ಅನಾವರಣಗೊಳಿಸಿದರು.

ADVERTISEMENT

ರಾಜ್ಯದಲ್ಲಿ ಡಿ.6 ಅನ್ನು ಮಹಾತ್ಮಗಾಂಧಿ ಸ್ಮರಣಾರ್ಥ ದಿನವಾಗಿ ಆಚರಿಸುವ ಕುರಿತು ಅಧಿಕೃತ ಹೇಳಿಕೆ ನೀಡಲಾಗಿದೆ ಎಂದು ಸಿಯಾಟಲ್‌ನ ಭಾರತೀಯ ರಾಯಭಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

‘ಗಾಂಧೀಜಿ ಅವರು ಶಾಂತಿ, ಅಹಿಂಸೆಯ ಜಾಗತಿಕ ಸಂಕೇತವಾಗಿದ್ದಾರೆ. ವಿಶ್ವದಾದ್ಯಂತ ಜನರು ಈ ತತ್ವಗಳನ್ನು ಪಾಲಿಸಲು ಪ್ರೇರಣೆಯಾಗಿದ್ದಾರೆ’ ಎಂದು ಅಧಿಕೃತ ಹೇಳಿಕೆ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.