ADVERTISEMENT

ಒಂಟೆ ಸಂತತಿ ತೀವ್ರ ಕುಸಿತ: ಆತಂಕ

ಪಿಟಿಐ
Published 21 ಡಿಸೆಂಬರ್ 2024, 13:50 IST
Last Updated 21 ಡಿಸೆಂಬರ್ 2024, 13:50 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ‘ದೇಶದಲ್ಲಿ ಒಂಟೆ ಸಂತತಿ ತೀವ್ರವಾಗಿ ಕುಸಿಯುತ್ತಿದೆ. ಹಾಗಾಗಿ, ಇವುಗಳನ್ನು ಸಾಂಪ್ರದಾಯಿಕವಾಗಿ ಸಾಕಣೆಯಲ್ಲಿ ತೊಡಗಿರುವ ಸಮುದಾಯಗಳ ಜೀವನೋಪಾಯಕ್ಕೆ ನೆರವು ನೀಡುವ ಅಗತ್ಯವಿದೆ’ ಎಂದು ಪಶುಪಾಲನಾ ಮತ್ತು ಹೈನುಗಾರಿಕೆ ಇಲಾಖೆಯ ಕಾರ್ಯದರ್ಶಿ ಅಲ್ಕಾ ಉಪಾಧ್ಯಾಯ ಹೇಳಿದ್ದಾರೆ.

ರಾಜಸ್ಥಾನದ ಬಿಕಾನೇರ್‌ನಲ್ಲಿ ಶುಕ್ರವಾರ ನಡೆದ ಒಂಟೆ ಹಾಲು ಉತ್ಪಾದನೆ ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಜಾನುವಾರು ಮಿಷನ್‌ನಡಿ ಹುಲ್ಲುಗಾವಲುಗಳ ಸಂರಕ್ಷಣೆ ಮತ್ತು ಒಂಟೆ ಸಾಕಣೆದಾರರಿಗೆ ಪ್ರೋತ್ಸಾಹ ನೀಡಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಒಂಟೆ ಸಾಕಣೆದಾರರು ಹಾಗೂ ಹೈನುಗಾರಿಕೆ ವಲಯದ 150ಕ್ಕೂ ಹೆಚ್ಚು ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ದೇಶದಲ್ಲಿ ಒಂಟೆ ಹಾಲಿನ ವಲಯವನ್ನು ಸದೃಢಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು.

2024ನೇ ವರ್ಷವನ್ನು ವಿಶ್ವಸಂಸ್ಥೆಯು ಅಂತರರಾಷ್ಟ್ರೀಯ ಒಂಟೆಗಳ ವರ್ಷವೆಂದು ಘೋಷಿಸಿದೆ.  

ದೇಶದಲ್ಲಿ ಹಸುವಿನ ಹಾಲು ಹೊರತಾಗಿ ಒಂಟೆ ಸೇರಿ ಇತರೆ ಪ್ರಾಣಿಗಳ ಹಾಲಿನ ಉತ್ಪಾದನೆ ಮತ್ತು ಬಳಕೆಯನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ. ಈ ಹಾಲಿನಲ್ಲಿ ಅಧಿಕ ಪೌಷ್ಟಿಕಾಂಶವಿದೆ. ರೋಗಗಳನ್ನು ವಾಸಿ ಮಾಡುವ ಗುಣವಿದೆ. ಹಾಗಾಗಿ, ಈ ಹಾಲಿನ ಸುಸ್ಥಿರ ಉತ್ಪಾದನೆಗೆ ಒತ್ತು ನೀಡುವ ಮೂಲಕ ಜನರ ಜೀವನಮಟ್ಟದ ಸುಧಾರಣೆಗೆ ಕ್ರಮವಹಿಸಲು ನಿರ್ಧರಿಸಲಾಗಿದೆ ಎಂದು ಆಹಾರ ಮತ್ತು ಕೃಷಿ ಸಂಘಟನೆಯ ಪ್ರತಿನಿಧಿ ಟಕಾಯುಕಿ ಹಗಿವಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.