ADVERTISEMENT

ಉತ್ತರಾಖಂಡ: ಧಾರ್ಚುಲಾ ಗಡಿಭಾಗದ 3 ಸೇತುವೆಗಳನ್ನು ಉದ್ಘಾಟಿಸಿದ ರಕ್ಷಣಾ ಸಚಿವ

ಭಾರತ – ಚೀನಾ ಗಡಿ ಮಾರ್ಗದ ರಸ್ತೆಗಳಲ್ಲಿರುವ ಸೇತುವೆಗಳು

ಪಿಟಿಐ
Published 28 ಜೂನ್ 2021, 8:54 IST
Last Updated 28 ಜೂನ್ 2021, 8:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪಿತೋರ್‌ಗಡ(ಉತ್ತರಾಖಂಡ): ಉತ್ತರಾಖಂಡದ ಪಿತೋರ್‌ಗಡ ಜಿಲ್ಲೆಯ ಧಾರ್ಚುಲಾದಲ್ಲಿ ಉಪ–ವಿಭಾಗದ ವ್ಯಾಪ್ತಿಯಲ್ಲಿ ಭಾರತ– ಚೀನಾ ಗಡಿ ಮಾರ್ಗದಲ್ಲಿ ನಿರ್ಮಾಣಗೊಂಡಿರುವ ಮೂರು ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಸೋಮವಾರ ಉದ್ಘಾಟಿಸಿದರು.

ರಕ್ಷಣಾ ಸಚಿವರು ರಾಷ್ಟ್ರರಾಜಧಾನಿ ದೆಹಲಿಯಿಂದಲೇ ಆನ್‌ಲೈನ್ ಮೂಲಕ ಮೂರು ಸೇತುವೆಗಳ ಉದ್ಘಾಟನಾ ಕಾರ್ಯವನ್ನು ನೆರವೇರಿಸಿದರು ಎಂದು ಬಾರ್ಡರ್‌ ರೋಡ್‌ ಆರ್ಗನೈಸೇಷನ್‌(ಬಿಆರ್‌ಒ) ಮುಖ್ಯ ಎಂಜಿನಿಯರ್ ಎಂಎನ್‌ವಿ ಪ್ರಸಾದ್ ತಿಳಿಸಿದರು.

‘ಮೂರರಲ್ಲಿ ಒಂದು ಸೇತುವೆ ತವಾಘಾಟ್‌ ಸಮೀಪ ನಿರ್ಮಿಸಿರುವ ತವಘಾಟ್‌–ಘಾಟಿಯಾ ಬಗರ್ ರಸ್ತೆಯಲ್ಲಿದ್ದರೆ, ಮತ್ತೊಂದು ಕಿರ್‌ಕುಟಿಯಾ ಸಮೀಪದ ಜೌಲಗಿಬಿ–ಮನ್‌ಸಿಯಾರಿ ರಸ್ತೆಯಲ್ಲಿದೆ. ಮೂರನೆಯದು ಲಾಸ್ಪಾ ಸಮೀಪ ನಿರ್ಮಿಸಿರುವ ಮನ್ಸುಯಾರಿ–ಬುಗಡಿಯಾರ್‌–ಮಿಲಾಮ್‌ ರಸ್ತೆಯಲ್ಲಿ ನಿರ್ಮಿಸಲಾಗಿದೆ ಎಂದು ಪ್ರಸಾದ್ ಮಾಹಿತಿ ನೀಡಿದ್ದಾರೆ.

ADVERTISEMENT

ಬಿಆರ್‌ಒ ನಿರ್ಮಾಣ ಮಾಡಿರುವ ಈ ಮೂರು ಸೇತುವೆಗಳು, ಹಿಮಾಲಯ ಪ್ರದೇಶದಲ್ಲಿರುವ ಗಡಿ ಭದ್ರತಾ ಚೌಕಿಗಳೊಂದಿಗೆ ಭಾರತದ ಪ್ರಮುಖ ಭೂಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತವೆ ಎಂದು ಅವರು ತಿಳಿಸಿದರು.

ಬಿಆರ್‌ಒ ನಿರ್ಮಿಸಿದ ಈ ಸೇತುವೆಗಳು ಹಿಮಾಲಯನ್ ಪ್ರದೇಶದ ಈ ಭಾಗದಲ್ಲಿರುವ ಗಡಿ ಭದ್ರತಾ ಪೋಸ್ಟ್‌ಗಳೊಂದಿಗೆ ಭಾರತೀಯ ಮುಖ್ಯ ಭೂಮಿಯನ್ನು ಸಂಪರ್ಕಿಸುತ್ತವೆ ಎಂದು ಪ್ರಸಾದ್ ಹೇಳಿದರು.

ಈ ಸೇತುವೆಗಳು 140-180 ಮೀಟರ್ ಉದ್ದವಿದ್ದು, ಪ್ರತಿಕೂಲ ಹವಾಮಾನವನ್ನು ಎದುರಿಸುತ್ತಾ, ಎತ್ತರದ ಪ್ರದೇಶಗಳಲ್ಲಿ ಇವುಗಳನ್ನು ಬಿಆರ್‌ಒ ನಿರ್ಮಾಣ ಮಾಡಿದೆ ಎಂದು ಅವರು ಹೇಳಿದರು.

ಈ ಸೇತುವೆಗಳು ಭದ್ರತಾ ಪಡೆಗಳು ಹಾಗೂ ಪ್ರವಾಸಿಗರ ಸಂಚಾರಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದು ಬಿಆರ್‌ಒ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.