ADVERTISEMENT

ಅತಿ ವೇಗದ 12 ರಕ್ಷಣಾ ಹಡಗುಗಳನ್ನು ವಿಯೆಟ್ನಾಂಗೆ ಹಸ್ತಾಂತರಿಸಿದ ರಾಜನಾಥ್ ಸಿಂಗ್

ಪಿಟಿಐ
Published 9 ಜೂನ್ 2022, 13:25 IST
Last Updated 9 ಜೂನ್ 2022, 13:25 IST
12 ಅತಿ ವೇಗದ ರಕ್ಷಣಾ ಹಡಗುಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಯೆಟ್ನಾಂಗೆ ಹಸ್ತಾಂತರಿಸಿದರು - ಪಿಟಿಐ ಚಿತ್ರ
12 ಅತಿ ವೇಗದ ರಕ್ಷಣಾ ಹಡಗುಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಯೆಟ್ನಾಂಗೆ ಹಸ್ತಾಂತರಿಸಿದರು - ಪಿಟಿಐ ಚಿತ್ರ   

ನವದೆಹಲಿ: ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ₹770 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ 12 ಅತಿ ವೇಗದ ರಕ್ಷಣಾ ಹಡಗುಗಳನ್ನು ವಿಯೆಟ್ನಾಂಗೆ ಹಸ್ತಾಂತರ ಮಾಡಿದರು.

ಜೂನ್ 8ರಿಂದ ವಿಯೆಟ್ನಾಂ ಪ್ರವಾಸ ಕೈಗೊಂಡಿರುವ ರಾಜನಾಥ್ ಸಿಂಗ್ ಅವರು, ಹಾಂಗ್ ಹಾ ಶಿಪ್‌ಯಾರ್ಡ್‌ನಲ್ಲಿ ಈ ಹಡಗುಗಳನ್ನು ಸಾಲದ ರೂಪದ ಯೋಜನೆಯಡಿ ವಿಯೆಟ್ನಾಂಗೆ ಹಸ್ತಾಂತರಿಸಿದರು.ದಕ್ಷಿಣ ಚೀನಾ ಸಮುದ್ರದ ಪ್ರಾಂತ್ಯದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಾಬಲ್ಯವನ್ನು ಎದುರಿಸುವ ನಿಟ್ಟಿನಲ್ಲಿ ಭಾರತ ಮತ್ತು ವಿಯೆಟ್ನಾಂ ದೇಶಗಳ ಭದ್ರತಾ ಸಹಕಾರದ ನಡುವೆ ನಡೆದ ಈ ಬೆಳವಣಿಗೆ ಮಹತ್ವ ಪಡೆದಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಾರತ ನೀಡಿದ ಸಾಲದ ಯೋಜನೆಯಡಿ 12 ಅತಿವೇಗದ ರಕ್ಷಣಾ ಹಡಗುಗಳ ನಿರ್ಮಾಣ ಯೋಜನೆ ಪೂರ್ಣಗೊಳಿಸಲಾಗಿದೆ. ಮೊದಲ 5 ಹಡಗುಗಳನ್ನು ಭಾರತದಲ್ಲಿ ಎಲ್ಅಂಡ್‌ಟಿ ಶಿಪ್‌ಯಾರ್ಡ್‌ನಲ್ಲಿ ನಿರ್ಮಿಸಲಾಗಿತ್ತು. ಇದೀಗ ಉಳಿದ 7 ಹಡುಗಗಳನ್ನು ಹಾಂಗ್ ಹಾ ಶಿಪ್ ಯಾರ್ಡ್‌ನಲ್ಲಿ ನಿರ್ಮಿಸಲಾಗಿದೆ. ಈ ಯೋಜನೆಯು ಉಭಯ ದೇಶಗಳ ನಡುವೆ ಹೆಚ್ಚಿನ ಭದ್ರತಾ ಸಹಕಾರ ಯೋಜನೆಗಳಿಗೆ ಪೂರಕವಾಗಲಿದೆ ಎಂಬ ಭರವಸೆಯಿದೆ. ಈ ಯೋಜನೆಯು ವಿಶ್ವಕ್ಕಾಗಿ ಭಾರತದಲ್ಲಿ ನಿರ್ಮಿಸಿ (ಮೇಕ್ ಇನ್ ಇಂಡಿಯಾ- ಮೇಕ್ ಫಾರ್ ದಿ ವರ್ಲ್ಡ್ ಮಿಷನ್) ಎಂಬುದಕ್ಕೆ ಉದಾಹರಣೆಯಾಗಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.