ADVERTISEMENT

ಸೇನೆ ಹಾರ್ಡ್‌ವೇರ್: ₹ 84 ಸಾವಿರ ಕೋಟಿ ಮೌಲ್ಯದ ಖರೀದಿಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 13:19 IST
Last Updated 16 ಫೆಬ್ರುವರಿ 2024, 13:19 IST
-
-   

ನವದೆಹಲಿ: ಕಡಲ ಗಡಿ ರಕ್ಷಣೆಯಲ್ಲಿ ಬಹುವಿಧದ ಕಾರ್ಯ ನಿರ್ವಹಿಸಬಲ್ಲ ಯುದ್ಧವಿಮಾನ ಸೇರಿದಂತೆ ಸೇನೆಗೆ ಅಗತ್ಯವಿರುವ ₹ 84,560 ಕೋಟಿ ಮೊತ್ತದ ಹಾರ್ಡ್‌ವೇರ್‌ ಖರೀದಿಗೆ ರಕ್ಷಣಾ ಸಚಿವಾಲಯ ಶುಕ್ರವಾರ ಒಪ್ಪಿಗೆ ನೀಡಿದೆ.

ಸಶಸ್ತ್ರ ಪಡೆಗಳ ದಾಳಿ ಸಾಮರ್ಥ್ಯವನ್ನು ಹೆಚ್ಚಿಸುವ ಈ ಖರೀದಿ ಪ್ರಸ್ತಾವಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದ ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಅನುಮೋದನೆ ನೀಡಿತು ಎಂದು ಸಚಿವಾಲಯ ತಿಳಿಸಿದೆ.

ಈ ಪ್ರಸ್ತಾವವು, ಹೊಸ ತಲೆಮಾರಿನ ಟ್ಯಾಂಕ್‌ ನಿರೋಧಕ ವ್ಯವಸ್ಥೆ, ವಾಯುಪ್ರದೇಶದಲ್ಲಿ ನಡೆಯುವ ದಾಳಿಯನ್ನು ನಿಯಂತ್ರಿಸಬಲ್ಲ ರಾಡಾರ್‌, ನೌಕಾಪಡೆಯಲ್ಲಿ ಉಪಯೋಗಿಸುವ ಮಧ್ಯಮ ವ್ಯಾಪ್ತಿಯ ಯುದ್ಧವಿಮಾನ, ವಿಮಾನಗಳಿಗೆ ಇಂಧನ ಮರುಪೂರಣಕ್ಕೆ ನೆರವಾಗುವ ವಿಮಾನಗಳು ಹಾಗೂ ವಿವಿಧ ಸಾಫ್ಟ್‌ವೇರ್‌ಗಳನ್ನು ಒಳಗೊಂಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.