ADVERTISEMENT

ದೇಶದ ರಕ್ಷಣಾ ಇಲಾಖೆಯ ಕಾರ್ಯದರ್ಶಿಗೆ ಕೋವಿಡ್-19 ರೋಗ ದೃಢ

ಏಜೆನ್ಸೀಸ್
Published 4 ಜೂನ್ 2020, 2:19 IST
Last Updated 4 ಜೂನ್ 2020, 2:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ:ಭಾರತದ ರಕ್ಷಣಾ ಇಲಾಖೆ ಕಾರ್ಯದರ್ಶಿಗೆ ಕೋವಿಡ್-19 ರೋಗ ಇರುವುದು ದೃಢಪಟ್ಟಿದೆ. ಬುಧವಾರ ರಕ್ಷಣಾ ಸಚಿವಾಲಯದಲ್ಲಿ ಇವರೊಂದಿಗೆ ಒಡನಾಡಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಕಾರ್ಯದರ್ಶಿ ಅವರ ಆರೋಗ್ಯ ಸ್ಥಿರವಾಗಿದ್ದು, ಈಗ ಅವರು ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ.

ರೈಸಿನಾ ಹಿಲ್ಸ್‌ನ ದಕ್ಷಿಣ ಬ್ಲಾಕ್‌ನಲ್ಲಿರುವ ಸಚಿವಾಲಯದ ಪ್ರಧಾನ ಕಚೇರಿಯಲ್ಲಿ 35 ಸಿಬ್ಬಂದಿಗಳು ಕಾರ್ಯವೆಸಗುತ್ತಿದ್ದಾರೆ. ಕಾರ್ಯದರ್ಶಿಗೆ ರೋಗ ದೃಢಪಟ್ಟಿರುವುದರಿಂದ ಅಲ್ಲಿದ್ದ ಸಿಬ್ಬಂದಿಗಳು ಹೋಮ್ ಕ್ವಾರಂಟೈನ್‌ನಲ್ಲಿರುವಂತೆ ಹೇಳಲಾಗಿದೆ.

ಕಾರ್ಯದರ್ಶಿ ಅವರ ಆರೋಗ್ಯ ಸ್ಥಿತಿ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಲಭ್ಯವಾಗಿಲ್ಲ. ರಕ್ಷಣಾ ಸಚಿವಾಲಯದ ವಕ್ತಾರ ಈ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ. ಮುಂಜಾಗ್ರತಾ ದೃಷ್ಟಿಯಿಂದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಬುಧವಾರಕಚೇರಿಗೆ ಬಂದಿಲ್ಲ ಎಂದು ಹೇಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.