ADVERTISEMENT

ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಪುಷ್ಪ ನಮನ

ಪಿಟಿಐ
Published 26 ಜುಲೈ 2023, 6:08 IST
Last Updated 26 ಜುಲೈ 2023, 6:08 IST
ನವದೆಹಲಿಯಲ್ಲಿ ವಿಜಯ್ ದಿವಸ್ ನಿಮಿತ್ತ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಪುಷ್ಪ ನಮನ ಸಲ್ಲಿಸಿದರು –ಪಿಟಿಐ ಚಿತ್ರ 
ನವದೆಹಲಿಯಲ್ಲಿ ವಿಜಯ್ ದಿವಸ್ ನಿಮಿತ್ತ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಪುಷ್ಪ ನಮನ ಸಲ್ಲಿಸಿದರು –ಪಿಟಿಐ ಚಿತ್ರ    

ಲಡಾಖ್: ಇಲ್ಲಿನ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಭೇಟಿ ನೀಡಿ, 1999ರ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ನಮನ ಸಲ್ಲಿಸಿದರು.

ರಾಜನಾಥ್ ಸಿಂಗ್ ಅವರು ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಹುತಾತ್ಮ ಯೋಧರ ಸಮಾಧಿಗಳಿಗೂ ಭೇಟಿ ನೀಡಿದರು.

ಸೇನಾ ಅಧಿಕಾರಿಗಳು ಮತ್ತು ಯೋಧರೊಂದಿಗೆ ಇಂದು ರಕ್ಷಣಾ ಸಚಿವರು ಸಂವಾದ ನಡೆಸಲಿದ್ದಾರೆ.

ADVERTISEMENT

1999ರಲ್ಲಿ ಪಾಕಿಸ್ತಾನಿ ನುಸುಳುಕೋರರು ವಶಪಡಿಸಿಕೊಂಡಿದ್ದ ಪರ್ವತ ಶ್ರೇಣಿಗಳನ್ನು ಭಾರತೀಯ ಸೈನಿಕರು ಯಶಸ್ವಿಯಾಗಿ ಮರು ವಶಕ್ಕೆಪಡೆದಿದ್ದರು.

ಭಾರತೀಯ ಸೇನೆಯು 1999ರ ಜುಲೈ 26 ರಂದು ಪಾಕಿಸ್ತಾನವನ್ನು ಯುದ್ಧದಲ್ಲಿ ಸೋಲಿಸಿತ್ತು. ಅಂದಿನಿಂದ, ಭಾರತೀಯ ಸಶಸ್ತ್ರ ಪಡೆಗಳ ಹೆಮ್ಮೆ ಮತ್ತು ಧೈರ್ಯವನ್ನು ಸ್ಮರಿಸುವುದಕ್ಕಾಗಿ ಈ ದಿನವನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ.

ಕಾರ್ಗಿಲ್ ಯುದ್ಧದಲ್ಲಿ 500 ಕ್ಕೂ ಹೆಚ್ಚು ಭಾರತೀಯ ಸೈನಿಕರು ಹುತಾತ್ಮರಾದರು.

ಇದನ್ನು ಓದಿ: _ ಕಾರ್ಗಿಲ್ ವಿಜಯ್‌ ದಿವಸ್‌: ಈ ದಿನದ ಬಗ್ಗೆ ತಿಳಿಯಲೇಬೇಕಾದ 10 ಅಂಶಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.