ADVERTISEMENT

ದೆಹಲಿಯ ವಾಯು ಗುಣಮಟ್ಟ 'ಕಳಪೆ': ಭಾರತೀಯ ಹವಾಮಾನ ಇಲಾಖೆ

ಪಿಟಿಐ
Published 29 ನವೆಂಬರ್ 2020, 6:29 IST
Last Updated 29 ನವೆಂಬರ್ 2020, 6:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಭಾನುವಾರವೂ ಕುಸಿತಗೊಂಡಿದೆ. ಬೆಳಿಗ್ಗೆ 9 ಗಂಟೆ ವೇಳೆ, ಗಾಳಿ ಗುಣಮಟ್ಟ ಸೂಚ್ಯಂಕ (ಎಕ್ಯೂಐ) 245 ದಾಖಲಾಗಿದೆ.

ಇನ್ನೊಂದೆಡೆ, ತಾಪಮಾನ ಕಡಿಮೆಯಾಗುವುದು ಹಾಗೂ ಗಾಳಿಯ ವೇಗ ತಗ್ಗುವ ಪರಿಣಾಮ, ನಗರದಲ್ಲಿ ವಾಯು ಗುಣಮಟ್ಟ ಮತ್ತಷ್ಟೂ ಕುಸಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂಲಗಳು ಹೇಳಿವೆ.

24 ಗಂಟೆ ಅವಧಿಯಲ್ಲಿ ವಾಯು ಗುಣಮಟ್ಟವನ್ನು ದಾಖಲಿಸಲಾಗಿದೆ. ಈ ದತ್ತಾಂಶದ ಪ್ರಕಾರ, ಶನಿವಾರ ಈ ಸೂಚ್ಯಂಕ 231 ದಾಖಲಾಗಿದ್ದರೆ, ಶುಕ್ರವಾರ 137, ಗುರುವಾರ 302 ಮತ್ತು ಬುಧವಾರ 413ರಷ್ಟು ಇತ್ತು.

ADVERTISEMENT

ಶನಿವಾರ ಗಾಳಿಯಗರಿಷ್ಠ ವೇಗ ಗಂಟೆಗೆ 15 ಕಿ.ಮೀ. ದಾಖಲಾಗಿತ್ತು. ಭಾನುವಾರ ಮತ್ತು ಸೋಮವಾರ ಈ ವೇಗ ಗಂಟೆಗೆ 8 ರಿಂದ 12 ಕಿ.ಮೀ. ಗೆ ಇಳಿಯಬಹುದು ಎಂದು ಇಲಾಖೆ ತಿಳಿಸಿದೆ. ಗಾಳಿಯ ವೇಗ ತಗ್ಗಿದಷ್ಟೂ ವಾಯು ಗುಣಮಟ್ಟ ಮತ್ತಷ್ಟು ಹದಗೆಡಬಹುದು. ಮುಂದಿನ ಎರಡು ದಿನಗಳಲ್ಲಿ ಗುಣಮಟ್ಟ ಮತ್ತಷ್ಟೂ ಕುಸಿಯುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ದೆಹಲಿಯಲ್ಲಿ ಭಾನುವಾರ ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಗರಿಷ್ಠ 26 ಡಿಗ್ರಿ ಸೆಲ್ಸಿಯಸ್‌ವರೆಗೆ ಇರಲಿದೆ ಎಂದೂ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.