ADVERTISEMENT

ದೆಹಲಿ ಗಾಳಿಯ ಗುಣಮಟ್ಟ ‘ಅತ್ಯಂತ ಕಳಪೆ’: 385ಕ್ಕೆ ತಲುಪಿದ AQI ಸೂಚ್ಯಂಕ

ಪಿಟಿಐ
Published 16 ನವೆಂಬರ್ 2025, 5:19 IST
Last Updated 16 ನವೆಂಬರ್ 2025, 5:19 IST
<div class="paragraphs"><p>ದೆಹಲಿಯಲ್ಲಿ ವಾಯುಮಾಲಿನ್ಯ ಮತ್ತೆ ಹೆಚ್ಚಳವಾಗಿರುವುದರಿಂದ ಸಂಚಾರ ಪೊಲೀಸರು ಮಾಸ್ಕ್‌ ಧರಿಸಿ ಕಾರ್ಯನಿರ್ವಹಿಸಿದರು </p></div>

ದೆಹಲಿಯಲ್ಲಿ ವಾಯುಮಾಲಿನ್ಯ ಮತ್ತೆ ಹೆಚ್ಚಳವಾಗಿರುವುದರಿಂದ ಸಂಚಾರ ಪೊಲೀಸರು ಮಾಸ್ಕ್‌ ಧರಿಸಿ ಕಾರ್ಯನಿರ್ವಹಿಸಿದರು

   

–ಪಿಟಿಐ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಇಂದು (ಭಾನುವಾರ) ಅತ್ಯಂತ ‘ಕಳಪೆ’ ಮಟ್ಟಕ್ಕೆ ಕುಸಿದಿದೆ. ದೆಹಲಿಯಲ್ಲಿ ಬೆಳಿಗ್ಗೆ 9 ಗಂಟೆಗೆ ವಾಯು ಗುಣಮಟ್ಟದ ಸೂಚ್ಯಂಕವು (ಎಕ್ಯೂಐ) 385ರಷ್ಟಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ.

ADVERTISEMENT

ದೆಹಲಿಯಲ್ಲಿ ಗುರುವಾರ ಬೆಳಿಗ್ಗೆ 9 ಗಂಟೆಗೆ ಎಕ್ಯೂಐ 340 ರಷ್ಟಿತ್ತು.

38 ಮೇಲ್ವಿಚಾರಣಾ ಕೇಂದ್ರಗಳ ಪೈಕಿ 20 ಕೇಂದ್ರಗಳಲ್ಲಿ ವಾಯು ಗುಣಮಟ್ಟ ಅತ್ಯಂತ ಕಳಪೆ ಮಟ್ಟಕ್ಕೆ ಕುಸಿದಿದೆ. ಇನ್ನುಳಿದ 18 ಕೇಂದ್ರಗಳಲ್ಲೂ ವಾಯು ಗುಣಮಟ್ಟ ಕಳಪೆ ಹಂತದಲ್ಲಿದೆ ಎಂದು ವರದಿಯಾಗಿದೆ.

ಎಕ್ಯೂಐ ಪ್ರಮಾಣ ಸೊನ್ನೆಯಿಂದ 50 ರಷ್ಟಿದ್ದರೆ ‘ಉತ್ತಮ’ ಎಂದು, 51ರಿಂದ 100ರಷ್ಟಿದ್ದರೆ ‘ಸಮಾಧಾನಕರ’, 101ರಿಂದ 200ರಷ್ಟಿದ್ದರೆ ‘ಸಾಧಾರಣ’, 201 ರಿಂದ 300ರಷ್ಟಿದ್ದರೆ ‘ಕಳಪೆ’ ಹಾಗೂ 301ರಿಂದ 400ರಷ್ಟಿದ್ದರೆ ‘ಅತ್ಯಂತ ಕಳಪೆ’ ಎಂದು ಹೇಳಲಾಗುತ್ತದೆ. 401ರಿಂದ 450ರಷ್ಟು ಕಂಡು ಬಂದರೆ ‘ತೀವ್ರ ಕಳಪೆ’ ಹಾಗೂ 450ಕ್ಕಿಂತ ಹೆಚ್ಚಾದರೆ ‘ತೀವ್ರಕ್ಕಿಂತಲೂ ಅಪಾಯಕಾರಿ’ ಎಂದು ಪರಿಗಣಿಸಲಾಗುತ್ತದೆ.

ದೆಹಲಿಯಲ್ಲಿ ಭಾನುವಾರ ಕನಿಷ್ಠ ತಾಪಮಾನ 9 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಇದು ಈ ಋತುವಿನ ಸರಾಸರಿಗಿಂತ 4.5ರಷ್ಟು ಕಡಿಮೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.