ADVERTISEMENT

ಲಾಕ್‌ಡೌನ್: ಮೇ3 ನಂತರ ದೆಹಲಿ ವಿಮಾನ ನಿಲ್ದಾಣ ಪುನರಾರಂಭಕ್ಕೆ ಸಿದ್ದತೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2020, 6:20 IST
Last Updated 25 ಏಪ್ರಿಲ್ 2020, 6:20 IST
ದೆಹಲಿ ವಿಮಾನ ನಿಲ್ದಾಣ
ದೆಹಲಿ ವಿಮಾನ ನಿಲ್ದಾಣ   

ನವದೆಹಲಿ: ಸತತ ಒಂದು ತಿಂಗಳ ಲಾಕ್ ಡೌನ್‌ನಿಂದ ಮುಚ್ಚಿರುವ ದೆಹಲಿಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪುನರಾರಂಭಕ್ಕೆ ಎಲ್ಲಾ ಸಿದ್ಧತೆ ನಡೆಸಿದೆ.

ಕೊರೊನಾ ಸೋಂಕು ಹರಡುವುದನ್ನು ತಡೆಯಲು ಈಗಾಗಲೆ ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದು, ಎಲ್ಲಾ ಅಂತರರಾಷ್ಟ್ರೀಯ ವಿಮಾನನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.ಅಲ್ಲದೆ ಅಂತರರಾಷ್ಟ್ರೀಯವಿಮಾನ ಹಾರಾಟವನ್ನೂ ರದ್ದುಗೊಳಿಸಲಾಗಿದೆ. ಮೇ 3ರವರೆಗೆ ಲಾಕ್‌ಡೌನ್ ಜಾರಿಯಲ್ಲಿದ್ದು, ಮೇ 3ರ ನಂತರ ಲಾಕ್‌ಡೌನ್ ತೆರವುಗೊಳಿಸಿದರೆ, ವಿಮಾನ ನಿಲ್ದಾಣ ಪುನರಾರಂಭ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಆಡಳಿತ ಮಂಡಳಿ ಶಿಫಾರಸು ಮಾಡಿದೆ.

ಪುನರಾರಂಭಿಸುವ ಜೊತೆಗೆಕೊರೊನಾ ಸೋಂಕು ಹರಡದಂತೆ ತಡೆಯಲು ಹೊಸ ಕಾನೂನುಗಳನ್ನು ಜಾರಿಗೆ ತರಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯು ವಿಮಾನನಿಲ್ದಾಣದ ಭದ್ರತಾ ಜವಾಬ್ದಾರಿ ಹೊತ್ತಿದೆ. ಭದ್ರತಾ ಪಡೆಯ ಸಿಬ್ಬಂದಿಗೆ ಹೊಸ ನಿಯಮಗಳನ್ನು ಜಾರಿಗೊಳಿಸುವ ಜವಾಬ್ದಾರಿಯನ್ನೂ ವಹಿಸಲಾಗಿದೆ.

ADVERTISEMENT

ಹೊಸ ನಿಯಮಗಳಂತೆವಿಮಾನ ನಿಲ್ದಾಣದಲ್ಲಿ ಕ್ಯೂ ಇರುವುದಿಲ್ಲ. ಬದಲಿಗೆ ಪ್ರಯಾಣಿಕರಿಗಾಗಿ 'ಸಿಟ್ ಅಂಡ್ ವೇಯ್ಟ್' ಪದ್ಧತಿ ಜಾರಿಗೆ ತರಲಾಗುವುದು. ವಿಮಾನನಿಲ್ದಾಣದ ಒಳಪ್ರವೇಶಿಸುವಾಗ ಪ್ರತಿಯೊಬ್ಬರಿಗೂದೇಹದ ಉಷ್ಣತೆಯನ್ನು ಪರೀಕ್ಷೆ ನಡೆಸಿದ ನಂತರವೇ ಪ್ರವೇಶ ನೀಡಲಾಗುವುದು. ಒಂದು ವೇಳೆ ಜ್ವರಇದ್ದರೆ ಪ್ರವೇಶ ನಿಷೇಧಿಸಲಾಗುವುದು. ಅಲ್ಲದೆ, ಮಾಸ್ಕ್ ಇಲ್ಲದಿದ್ದರೂ ವಿಮಾನನಿಲ್ದಾಣಪ್ರವೇಶ ನಿಷೇಧಿಸಲಾಗುವುದು, ಈ ಪದ್ದತಿಯಲ್ಲಿ ಪ್ರಯಾಣಿಕರಿಗಾಗಿ ವಿಶಾಲಆಸನಸೌಲಭ್ಯಕಲ್ಪಿಸಲಾಗುವುದು. ಪ್ರಯಾಣಿಕರಿಗಾಗಿ ಇರುವ ಆ ಆಸನದಲ್ಲಿ ಒಂದಕ್ಕೂ ಮತ್ತೊಂದು ಆಸನದ ನಡುವೆಒಂದು ಮೀಟರ್ ಅಂತರ ಇರುವಂತೆ ವ್ಯವಸ್ಥೆ ಮಾಡಲಾಗುವುದು.ಪ್ರಯಾಣಿಕರು ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದನ್ನುಕಡ್ಡಾಯಗೊಳಿಸಲಾಗುವುದು ಎಂದು ತಿಳಿಸಲಾಗಿದೆ.

ವಿಮಾನ ನಿಲ್ದಾಣದಲ್ಲಿ ಇಷ್ಟೆಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದರೆ, ವಿಮಾನದ ಒಳಗೆ ಮತ್ತಷ್ಟು ಬದಲಾವಣೆ ತರಲು ಉದ್ದೇಶಿಸಲಾಗಿದೆ. ಪ್ರಯಾಣಿಕರು ಪ್ರತಿಯೊಬ್ಬರೂ ಮಾಸ್ಕ್ ಧರಿಸಿರಲೇಬೇಕು. ವಿಮಾನದ ಒಳಗೆ ಶೌಚಾಲಯದ ಬಳಕೆಯನ್ನು ಮಿತಿಗೊಳಿಸಲಾಗುವುದು ಎಂದು ತಿಳಿಸಿದೆ.

ಗೋ ಏರ್ ವಿಮಾನ ಸಂಸ್ಥೆಯುಈಗಾಗಲೆ ಯಾವುದೇ ಆಹಾರ ಪದಾರ್ಥಗಳನ್ನು ವಿಮಾನದ ಒಳಗೆತರದಂತೆ ನಿಷೇಧಿಸಿ ಆದೇಶ ಹೊರಡಿಸಿದೆ. ಅಲ್ಲದೆ, ವಿಮಾನದ ಸಿಬ್ಬಂದಿಯ ಜೊತೆ ಸಂಪರ್ಕಗಳನ್ನು ಕಡಿಮೆ ಮಾಡಲಾಗುವುದು.ವಿಮಾನದಲ್ಲಿ ಊಟ ನಿಷೇಧಿಸಲಾಗಿದೆ. ವಿಮಾನಯಾನದ ಸಿಬ್ಬಂದಿಯು ಪ್ರಯಾಣಿಕರ ಜೊತೆ ಮಾತುಕತೆ ಕಡಿಮೆ ಮಾಡಲಾಗುವುದು ಎಂದು ಇಂಡಿಗೋ ವಿಮಾನ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.