ADVERTISEMENT

ಕಲುಷಿತ ಪ್ರದೇಶಗಳನ್ನು ಒಳಗೊಂಡ ರಾಜ್ಯಗಳ ಪಟ್ಟಿಯಲ್ಲಿ ದೆಹಲಿಗೆ 3ನೇ ಸ್ಥಾನ

ಪಿಟಿಐ
Published 7 ಮಾರ್ಚ್ 2021, 8:21 IST
Last Updated 7 ಮಾರ್ಚ್ 2021, 8:21 IST
ನವದೆಹಲಿಯ ಕಲಿಂಡಿ ಕುಂಜ್‌ನಲ್ಲಿ ಯಮುನಾ ನದಿಯ ಮೇಲ್ಮೈನಲ್ಲಿ ವಿಷಕಾರಿ ನೊರೆ ತೇಲುತ್ತಿರುವುದು (ಪಿಟಿಐ)
ನವದೆಹಲಿಯ ಕಲಿಂಡಿ ಕುಂಜ್‌ನಲ್ಲಿ ಯಮುನಾ ನದಿಯ ಮೇಲ್ಮೈನಲ್ಲಿ ವಿಷಕಾರಿ ನೊರೆ ತೇಲುತ್ತಿರುವುದು (ಪಿಟಿಐ)   

ನವದೆಹಲಿ: ‘ಅತಿ ಹೆಚ್ಚು ಕಲುಷಿತ ಸ್ಥಳಗಳನ್ನು ಹೊಂದಿರುವ ರಾಜ್ಯಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯು ಮೂರನೇ ಸ್ಥಾನದಲ್ಲಿದೆ’ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಹೇಳಿದೆ.

‘ಭಾರತದಲ್ಲಿ ವಿಷಕಾರಿ ಮತ್ತು ಅಪಾಯಕಾರಿ ವಸ್ತುಗಳಿಂದ ಕಲುಷಿತಗೊಂಡ 112 ಸ್ಥಳಗಳನ್ನು ಗುರುತಿಸಲಾಗಿದೆ. ಇದಲ್ಲದೆ 168 ಸ್ಥಳಗಳು ಕಲುಷಿತಗೊಂಡಿರಬಹುದು. ಆದರೆ ಈ ಬಗ್ಗೆ ದೃಢೀಕರಣದ ಅಗತ್ಯವಿದೆ’ ಎಂದು ಸಿಪಿಸಿಬಿ ತಿಳಿಸಿದೆ.

ಈ ಪಟ್ಟಿಯಲ್ಲಿ 23 ಕಲುಷಿತ ಸ್ಥಳಗಳೊಂದಿಗೆ ಒಡಿಶಾ ಮೊದಲ ಸ್ಥಾನದಲ್ಲಿದ್ದು, 21 ಕಲುಷಿತ ಪ್ರದೇಶಗಳೊಂದಿಗೆ ಉತ್ತರ ಪ್ರದೇಶ ದ್ವಿತೀಯ ಮತ್ತು ದೆಹಲಿ ತೃತೀಯ ಸ್ಥಾನದಲ್ಲಿದೆ.

ADVERTISEMENT

‘ದೆಹಲಿಯಲ್ಲಿ ಭಲ್ಸ್ವಾ, ಗಾಜಿಪುರ, ಜಿಲ್ಮಿಲ್‌, ವಾಜಿರ್ಪುರದ ಕೈಗಾರಿಕಾ ಪ್ರದೇಶಗಳು, ನ್ಯೂ ಫ್ರೆಂಡ್ಸ್ ಕಾಲೊನಿ, ದಿಲ್ಶಾದ್ ಗಾರ್ಡನ್ ಮತ್ತು ಲಾರೆನ್ಸ್ ರಸ್ತೆ ಸೇರಿದಂತೆ ಒಟ್ಟು 11 ಕಲುಷಿತ ತಾಣಗಳು ಇವೆ. ಇದನ್ನು ಹೊರತುಪಡಿಸಿ ದೆಹಲಿಯಲ್ಲಿ ಇನ್ನೂ 12 ಪ್ರದೇಶಗಳು ಕಲುಷಿತಗೊಂಡಿರುವ ಸಾಧ್ಯತೆಗಳಿವೆ’ ಎಂದು ಸಿಪಿಸಿಬಿ ಹೇಳಿದೆ.

‘ಕಲುಷಿತ ಸ್ಥಳಗಳು ಮಾನವ ನಿರ್ಮಿತವಾಗಿದ್ದು, ಮಾನವ ಬಳಿಸಿದ ವಸ್ತುಗಳು ವಿಷಕಾರಿ ಮತ್ತು ಅಪಾಯಕಾರಿಯಾಗಿ ಮಾರ್ಪಡಾಗುತ್ತಿವೆ. ಇದು ಪರಿಸರ ಮತ್ತು ಮಾನವನ ಆರೋಗ್ಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ’ ಎಂದು ಕೇಂದ್ರ ಪರಿಸರ ಸಚಿವಾಲಯ ತಿಳಿಸಿದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ನಿರ್ದೇಶನದ ಮೇರೆಗೆ ಈಗಾಗಲೇ ಗುಜರಾತ್‌, ಕೇರಳ, ಜಾರ್ಖಾಂಡ್‌, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ಉತ್ತರ ಪ್ರದೇಶ ಸೇರಿ ಒಟ್ಟು 7 ರಾಜ್ಯದ 14 ಕಲುಷಿತ ಸ್ಥಳಗಳಲ್ಲಿ ಪರಿಹಾರ ಕಾರ್ಯವನ್ನು ನಡೆಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.