ನವದೆಹಲಿ: ಎಎಪಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ದೆಹಲಿಯ ಶಾಲೆಗಳು ಇತ್ತೀಚೆಗೆ ಎದುರಿಸಿದ ಹುಸಿ ಬಾಂಬ್ ಬೆದರಿಕೆಗಳ ಕುರಿತು ಸೋಮವಾರ ಪ್ರಶ್ನೆಗಳನ್ನು ಎತ್ತಿದೆ.
‘ಕಾಂಗ್ರೆಸ್ ಮತ್ತು ಎಎಪಿ ಹೊರನೋಟಕ್ಕೆ ಭಿನ್ನವಾಗಿ ಕಂಡುಬಂದರೂ ಒಳಗೆ ಒಂದೇ’ ಎಂದು ಬಿಜೆಪಿ ನಾಯಕ ಅನುರಾಗ್ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಕಾಂಗ್ರೆಸ್‌ನ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ ಎಎಪಿ ಅಧಿಕಾರಕ್ಕೆ ಬಂದಿತು. ಆದರೆ ಈಗ ಎಎಪಿಯಲ್ಲಿ ಅರಾಜಕತೆ, ಪ್ರತ್ಯೇಕತೆ, ಭಯೋತ್ಪಾದನೆ, ವದಂತಿ ಹರಡುವಿಕೆ ಹಾಗೂ ಅಪರಾಧಿಗಳು ತುಂಬಿದ್ದಾರೆ’ ಎಂದು ಅವರು ಆರೋಪಿಸಿದರು.
‘ಕೆಲವರು ಬಾಂಬ್ ಸ್ಫೋಟದ ವದಂತಿಗಳನ್ನು ಹರಡಿ, ದೆಹಲಿಯ ಶಾಲಾ ಮಕ್ಕಳ ಪೋಷಕರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ವದಂತಿ ಹರಡುವರ ಜತೆ ಯಾರು ಸಂಪರ್ಕದಲ್ಲಿದ್ದಾರೆ ಎನ್ನುವುದಕ್ಕೆ ಆತಿಶಿ ಮತ್ತು ಕೇಜ್ರಿವಾಲ್ ಉತ್ತರ ನೀಡುತ್ತಾರಾ? ಅರಾಜಕತೆ ಸೃಷ್ಟಿಸುವುದರಲ್ಲಿ ಈ ಇಬ್ಬರು ಹಳೆ ಆಟಗಾರರು’ ಎಂದು ಠಾಕೂರ್ ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.