ADVERTISEMENT

ದೆಹಲಿ ಸ್ಫೋಟ: ವಿವಿಧ ರಾಷ್ಟ್ರಗಳ ಕಳವಳ

ಪಿಟಿಐ
Published 11 ನವೆಂಬರ್ 2025, 14:51 IST
Last Updated 11 ನವೆಂಬರ್ 2025, 14:51 IST
...
...   

ನ್ಯೂಯಾರ್ಕ್‌/ವಾಷಿಂಗ್ಟನ್‌: ನವದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಅಮೆರಿಕ, ಚೀನಾ, ನೇಪಾಳ, ಮಾಲ್ಡೀವ್ಸ್‌ ಸೇರಿದಂತೆ ವಿವಿಧ ದೇಶಗಳು ಕಳವಳ ವ್ಯಕ್ತಪಡಿಸಿವೆ.

ಘಟನೆಯ ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳುವುದರ ಜತೆಗೆ ಭಾರತದಲ್ಲಿರುವ ತಮ್ಮ ದೇಶದ ಪ್ರಜೆಗಳಿಗೆ ಎಚ್ಚರಿಕೆಯಿಂದ ಇರುವಂತೆಯೂ ಸಲಹೆ ನೀಡಿವೆ. 

‘ಸ್ಫೋಟ ಪ್ರಕರಣವು ಆಘಾತವನ್ನುಂಟು ಮಾಡಿದ್ದು, ಪರಿಸ್ಥಿತಿಯನ್ನು ನಾವು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದೇವೆ’ ಎಂದು  ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ADVERTISEMENT

‘ಭಾರತ ಸರ್ಕಾರವು ಈಗಾಗಲೇ ವಿವಿಧ ರಾಜ್ಯಗಳಲ್ಲಿ ಭದ್ರತಾ ಕಟ್ಟೆಚ್ಚರ ಘೋಷಿಸಿದೆ. ಯಾವುದೇ ರೀತಿಯ ರಾಜತಾಂತ್ರಿಕ ನೆರವು ಒದಗಿಸಲು ನಾವು ಸಿದ್ಧರಾಗಿದ್ದೇವೆ’ ಎಂದೂ ಹೇಳಿದ್ದಾರೆ.

ಜತೆಗೆ ಭಾರತದಲ್ಲಿರುವ ಅಮೆರಿಕನ್ನರಿಗೂ ಸಲಹೆ ನೀಡಿರುವ ಅವರು, ‘ಕೆಂಪುಕೋಟೆ, ಚಾಂದಿನಿ ಚೌಕ್‌ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಜನನಿಬಿಡ ಪ್ರದೇಶಗಳಿಗೆ ಅನವಶ್ಯಕ ಭೇಟಿ ನೀಡಬೇಡಿ. ಪ್ರವಾಸಿಗರು ಹೆಚ್ಚಾಗಿರುವ ಸ್ಥಳಗಳಲ್ಲಿ ಇದ್ದರೆ ಸದಾ ಎಚ್ಚರಿಕೆಯಿಂದಿರಿ, ಸ್ಥಳೀಯ ಮಾಧ್ಯಮಗಳ ವರದಿಯನ್ನು ವೀಕ್ಷಿಸಿ’ ಎಂದು ಸಲಹೆ ನೀಡಿದ್ದಾರೆ.

ಬ್ರಿಟನ್‌ ಎಚ್ಚರಿಕೆ: ಬ್ರಿಟನ್‌ ಕೂಡ ಭಾರತಕ್ಕೆ ಪ್ರಯಾಣ ಬೆಳಸಿರುವ ತನ್ನ ಪ್ರಜೆಗಳಿಗಾಗಿ ಹಲವು ಸಲಹೆ, ಸೂಚನೆಗಳನ್ನು ಹೊರಡಿಸಿದೆ.

...
...
  ನೇಪಾಳ
ದುರ್ಘಟನೆಯ ವಿಚಾರ ತಿಳಿದು ಆಘಾತವಾಗಿದೆ. ಸ್ಫೋಟದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇವೆ. ಪ್ರಸಕ್ತ ಲಭ್ಯವಿರುವ ಮಾಹಿತಿಗಳ ಪ್ರಕಾರ ಘಟನೆಯಲ್ಲಿ ಚೀನಾದ ಯಾವುದೇ ಪ್ರಜೆಗೂ ಹಾನಿಯಾಗಿಲ್ಲ ಎಂಬುದು ತಿಳಿದುಬಂದಿದೆ. 
– ಲಿನ್‌ ಜಿಯಾನ್ ಚೀನಾ ವಿದೇಶಾಂಗ ವಕ್ತಾರ 
ದೆಹಲಿಯಲ್ಲಿ ನಡೆದ ಸ್ಫೋಟದ ಬಗ್ಗೆ ತಿಳಿದು ಬೇಸರವಾಗಿದೆ. ಶ್ರೀಲಂಕಾವು ಭಾರತೀಯರ ಪರವಾಗಿ ಇರಲಿದೆ.
– ಅನುರಾ ಕುಮಾರ ಡಿಸ್ಸನಾಯಕೆ ಶ್ರೀಲಂಕಾ ಅಧ್ಯಕ್ಷ
ಸಂತ್ರಸ್ತರಿಗೆ ಸಾಂತ್ವನ ತಿಳಿಸಲು ಬಯಸುತ್ತೇವೆ ಘಟನೆಯಲ್ಲಿ ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇವೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತದ ಜನತೆ ಹಾಗೂ ಭಾರತ ಸರ್ಕಾರದ ಜತೆಗೆ ಮಾಲ್ಡೀವ್ಸ್‌ ಇರಲಿದೆ – ಮೊಹಮದ್‌ ಮುಯಿಜ್ಜು ಮಾಲ್ಡೀವ್ಸ್‌ ಅಧ್ಯಕ್ಷ –––  ಈ ದುಃಖದ ಸಮಯದಲ್ಲಿ ನೇಪಾಳವು ಭಾರತದ ಜತೆಗಿರಲಿದೆ. 
– ಸುಶೀಲಾ ಕಾರ್ಕಿ ನೇಪಾಳ ಪ್ರಧಾನಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.