ADVERTISEMENT

ಕುಸ್ತಿಪಟು ಪುನಿಯಾ ವಿರುದ್ಧದ ಮಾನಹಾನಿ ಪ್ರಕರಣ ಮುಕ್ತಾಯ

ಪಿಟಿಐ
Published 30 ಮೇ 2025, 16:17 IST
Last Updated 30 ಮೇ 2025, 16:17 IST
ಬಜರಂಗ್‌ ಪೂನಿಯಾ
ಬಜರಂಗ್‌ ಪೂನಿಯಾ   

ನವದೆಹಲಿ: ಕುಸ್ತಿಪಟು ಬಜರಂಗ್‌ ಪೂನಿಯಾ ಅವರು ಕೋಚ್‌ ನರೇಶ್ ದಹಿಯಾ ಅವರಿಗೆ ಬೇಷರತ್ ಕ್ಷಮೆ ಕೋರಿರುವ ಹಿನ್ನಲೆಯಲ್ಲಿ ದೆಹಲಿ ಕೋರ್ಟ್‌, ಪೂನಿಯಾ ಅವರ ವಿರುದ್ಧದ ಕ್ರಿಮಿನಲ್‌ ಮಾನಹಾನಿ ಮೊಕದ್ದಮೆ ಪ್ರಕರಣವನ್ನು ಮುಕ್ತಾಯಗೊಳಿಸಿದೆ.  

ಈ ಪ್ರಕರಣವನ್ನು ನಮ್ಮ ನಡುವೆಯೇ ರಾಜಿ ಮಾಡಿಕೊಳ್ಳುತ್ತೇವೆ ಎಂದು ಉಭಯತ್ರರು ಕೋರ್ಟ್‌ಗೆ ತಿಳಿಸಿದ್ದರು. ಇದನ್ನು ಮಾನ್ಯ ಮಾಡಿದ್ದು, ಪ್ರಕರಣ ಮುಕ್ತಾಯಗೊಳಿಸಿದೆ ಎಂದು ನ್ಯಾಯಾಧೀಶರು ಈ ಕುರಿತ ಆದೇಶದಲ್ಲಿ ತಿಳಿಸಿದ್ದಾರೆ.

ಜಂತರ್ ಮಂತರ್‌ನಲ್ಲಿ ಮೇ 10, 2023ರಂದು ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಪುನಿಯಾ ಮತ್ತು ಇತರ ಕುಸ್ತಿಪಟುಗಳು ನನ್ನ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ದಹಿಯಾ ಅವರು ಆರೋಪಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.