ADVERTISEMENT

‘ಕಾಳಿ’ ಸಿನಿಮಾಗೆ ತಡೆಯಾಜ್ಞೆ: ಲೀನಾಗೆ ಮತ್ತೊಮ್ಮೆ ಸಮನ್ಸ್‌ ಜಾರಿ

ಪಿಟಿಐ
Published 30 ಆಗಸ್ಟ್ 2022, 14:35 IST
Last Updated 30 ಆಗಸ್ಟ್ 2022, 14:35 IST
ಲೀನಾ ಮಣಿಮೇಕಲೈ (ಟ್ವಿಟ್ಟರ್ ಚಿತ್ರ)
ಲೀನಾ ಮಣಿಮೇಕಲೈ (ಟ್ವಿಟ್ಟರ್ ಚಿತ್ರ)   

ನವದೆಹಲಿ: ಲೀನಾ ಮಣಿಮೇಕಲೈ ಅವರು ನಿರ್ಮಿಸಿರುವ ‘ಕಾಳಿ’ ಸಿನಿಮಾಗೆ ನೀಡಿರುವ ತಡೆಯಾಜ್ಞೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ದೆಹಲಿ ನ್ಯಾಯಾಲಯವು ಲೀನಾ ಅವರಿಗೆ ಮತ್ತೊಮ್ಮೆ ಸಮನ್ಸ್‌ ಜಾರಿ ಮಾಡಿದೆ.

ಆದೇಶ ಕೊಡುವ ಮೊದಲು ಲೀನಾ ಅವರ ವಾದವನ್ನು ಕೇಳಬೇಕು ಎಂದು ನ್ಯಾಯಾಲಯ ಹೇಳಿದೆ. ಈ ಹಿಂದೆ ನ್ಯಾಯಾಲಯವು ಆಗಸ್ಟ್‌ 6ರಂದು ಲೀನಾ ಅವರಿಗೆ ಸಮನ್ಸ್‌ ನೀಡಿತ್ತು.

‘ಲೀನಾ ಹಾಗೂ ಟೂರಿಂಗ್‌ ಟಾಕೀಸ್‌ ಮೀಡಿಯಾ ವರ್ಕ್ಸ್‌ ಪ್ರೈ.ಲಿ ಅವರಿಗೆ ಈ ಹಿಂದೆ ನೀಡಿದ್ದ ಸಮನ್ಸ್‌ ತಲುಪಿಲ್ಲ. ಆದ್ದರಿಂದ ವಾಟ್ಸ್‌ಆ್ಯಪ್‌, ಇ–ಮೇಲ್‌ ಮೂಲಕ ಹೊಸ ಸಮನ್ಸ್‌ ನೀಡಬೇಕು’ ಎಂದು ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶ ಅಭಿಷೇಕ್‌ ಕುಮಾರ್‌ ಅವರು ನಿರ್ದೇಶಿಸಿದರು. ಅರ್ಜಿಯ ವಿಚಾರಣೆಯನ್ನು ನವೆಂಬರ್‌ 1ಕ್ಕೆ ಮುಂದೂಡಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.