ADVERTISEMENT

ಅಗ್ನಿ ದುರಂತ: ಮೂವರ ಸಾವು

ಪಿಟಿಐ
Published 13 ಜುಲೈ 2019, 19:20 IST
Last Updated 13 ಜುಲೈ 2019, 19:20 IST
ಬೆಂಕಿ ನಂದಿಸಲು ಕಾರ್ಯಾಚರಣೆಯಲ್ಲಿ ತೊಡಗಿರುವ ಅಗ್ನಿಶಾಮಕ ದಳ
ಬೆಂಕಿ ನಂದಿಸಲು ಕಾರ್ಯಾಚರಣೆಯಲ್ಲಿ ತೊಡಗಿರುವ ಅಗ್ನಿಶಾಮಕ ದಳ   

ನವದೆಹಲಿ: ಷಹ್‌ದಾರದ ಝೀಲ್‌ಮಿಲ್‌ ಕೈಗಾರಿಕಾ ಪ್ರದೇಶದಲ್ಲಿನ ರಬ್ಬರ್‌–ಪ್ಲಾಸ್ಟಿಕ್‌ಕಾರ್ಖಾನೆಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಮೃತರನ್ನು ಮಂಜೂ, ಸಂಗೀತಾ ಮತ್ತು ಶೋಯಿಬ್‌ ಎಂದು ಗುರುತಿಸ ಲಾಗಿದೆ.ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಅವಘಡ ನಡೆದಿದ್ದು, ಅಗ್ನಿಶಾಮಕ ದಳದ31 ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದರು. ದುರಂತಕ್ಕೆ ಕಾರಣ ಏನೆಂಬುದು ಗೊತ್ತಾಗಿಲ್ಲ ಎಂದು ಡಿಸಿಪಿ ಮೇಘನಾ ಯಾದವ್‌ ತಿಳಿಸಿದ್ದಾರೆ.

ಮನೆ ಬಳಕೆಯಪ್ಲಾಸ್ಟಿಕ್‌ ಮತ್ತು ರಬ್ಬರ್‌ ಸಾಮಾನುಗಳನ್ನು ತಯಾರಿ ಸುವ ಕಾರ್ಖಾನೆ ಇದಾಗಿದ್ದು, ಕಾರ್ಖಾನೆ ಕಟ್ಟಡ ಮೂರು ಮಹಡಿಯನ್ನು ಒಳಗೊಂಡಿದೆ.ಘಟನಾ ಸ್ಥಳಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.