ADVERTISEMENT

ದೆಹಲಿ ಸಿಸಿಎಸ್‌ ಭವನದಲ್ಲಿ ಆಕಸ್ಮಿಕ ಅಗ್ನಿ ಅವಘಡ

ಪಿಟಿಐ
Published 14 ಜೂನ್ 2025, 15:28 IST
Last Updated 14 ಜೂನ್ 2025, 15:28 IST
<div class="paragraphs"><p>ಅಗ್ನಿ ಅವಘಡ</p></div>

ಅಗ್ನಿ ಅವಘಡ

   

(ಸಾಂದರ್ಭಿಕ ಚಿತ್ರ)

ನವದೆಹಲಿ: ಇಲ್ಲಿನ ಜನಪಥ್‌ ರಸ್ತೆಯಲ್ಲಿರುವ ಕಾಮನ್‌ ಸೆಂಟ್ರಲ್‌ ಸೆಕ್ರಟರಿಯೇಟ್‌ ಭವನದಲ್ಲಿ (ಸಿಸಿಎಸ್‌) ಶನಿವಾರ ಬೆಳಿಗ್ಗೆ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ.

ADVERTISEMENT

‘ಬೆಳಿಗ್ಗೆ 11.13ರ ಸುಮಾರಿಗೆ, ಸಿಸಿಎಸ್‌ ಭವನದ ಮೂರನೆಯ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿರುವ ಕುರಿತು ಮಾಹಿತಿ ಬಂತು. ತಕ್ಷಣ 15 ಅಗ್ನಿಶಾಮಕ ವಾಹನಗಳೊಂದಿಗೆ ಅಲ್ಲಿಗೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡೆವು. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ, ಯಾವುದೇ ಜೀವಹಾನಿ ಸಂಭವಿಸಿಲ್ಲ’ ಎಂದು ದೆಹಲಿ ಅಗ್ನಿಶಾಮಕ ಅಧಿಕಾರಿ (ಡಿಎಫ್‌ಎಸ್‌) ಹೇಳಿದರು.  

ಸಿಸಿಎಸ್‌ ಭವನದ ಮೂರನೆಯ ಮಹಡಿಯ ಸಭಾಂಗಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿದ್ದ ಪೀಠೋಪಕರಣ, ಇತರೆ ವಸ್ತುಗಳಿಗೆ ಹಾನಿಯಾಗಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.