ADVERTISEMENT

ದೆಹಲಿಯಲ್ಲಿ ನರ್ಸಿಂಗ್‌ ಹೋಂ ಸಿಬ್ಬಂದಿಗೆ ಅಗ್ನಿಶಾಮಕ ತರಬೇತಿ ನೀಡಲು ಚಿಂತನೆ

ಪಿಟಿಐ
Published 13 ಮಾರ್ಚ್ 2021, 9:36 IST
Last Updated 13 ಮಾರ್ಚ್ 2021, 9:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ನರ್ಸಿಂಗ್‌ ಹೋಂ ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಅಗ್ನಿಶಾಮಕ ತರಬೇತಿಯನ್ನು ನೀಡಲು ದೆಹಲಿಯ ಅಗ್ನಿಶಾಮಕ ಪಡೆ ಚಿಂತನೆ ನಡೆಸಿದೆ. ತುರ್ತು ಪರಿಸ್ಥಿತಿ ಎದುರಿಸಲು ಅವರನ್ನು ಸಜ್ಜುಗೊಳಿಸುವುದೇ ಇದರ ಮೂಲ ಉದ್ದೇಶ’ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.

‘ರೋಹಿಣಿ ಫೈರ್‌ ಸೇಫ್ಟಿ ಮ್ಯಾನೆಂಜ್‌ಮೆಂಟ್‌ ಅಕಾಡೆಮಿಯಲ್ಲಿ ಅರ್ಧ ದಿನದ ಮಟ್ಟಿಗೆ ಅಗ್ನಿಶಾಮಕ ತರಬೇತಿ ಕಾರ್ಯಕ್ರಮ ನಡೆಸುವ ಬಗ್ಗೆ ಇಲಾಖೆ ಶಿಫಾರಸು ಮಾಡಿದೆ. ಈ ಕಾರ್ಯಕ್ರಮದಡಿ ನರ್ಸಿಂಗ್‌ ಹೋಂ ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಅಗ್ನಿಶಾಮಕ ತರಬೇತಿ ನೀಡಲಾವುದು. ಪ್ರತಿ ಬ್ಯಾಚ್‌ನಲ್ಲಿ ಗರಿಷ್ಠ 40 ಸಿಬ್ಬಂದಿ ಇರಲಿದ್ದಾರೆ’ ಎಂದು ದೆಹಲಿ ಅಗ್ನಿಶಾಮಕ ಪಡೆಯ ನಿರ್ದೇಶಕ ಅತುಲ್‌ ಗಾರ್ಗ್‌ ಹೇಳಿದರು.

‘ಈ ವೇಳೆ ಅವರಿಗೆ ಸುರಕ್ಷತಾ ಕ್ರಮ ಮತ್ತು ಗಾಯಳುಗಳ ಆರೈಕೆ ಬಗ್ಗೆ ಹೇಳಿಕೊಡಲಾಗುವುದು. ಇದು ಅವರಿಗೆ ತುರ್ತುಪರಿಸ್ಥಿತಿಯನ್ನು ಎದುರಿಸಲು ಸಹಾಯ ಮಾಡಲಿದೆ. ವಿವಿಧ ಸಂಸ್ಥೆಗಳಿಂದ ಸಲ್ಲಿಕೆಯಾಗುವ ಅರ್ಜಿಗಳ ಆಧಾರದ ಮೇಲೆ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ ನೀಡಲಿದ್ದೇವೆ. ಪ್ರತಿ ಅಭ್ಯರ್ಥಿಗೆ ₹1000 ಶುಲ್ಕವನ್ನು ನಿಗದಿ ಮಾಡಲಾಗುವುದು’ ಎಂದು ಅವರು ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.