ADVERTISEMENT

ಮೊದಲ ಹಂತದಲ್ಲಿ ದೆಹಲಿಯ 51 ಲಕ್ಷ ಜನರಿಗೆ ಕೋವಿಡ್‌ ಲಸಿಕೆ: ಕೇಜ್ರಿವಾಲ್‌

ಏಜೆನ್ಸೀಸ್
Published 24 ಡಿಸೆಂಬರ್ 2020, 10:09 IST
Last Updated 24 ಡಿಸೆಂಬರ್ 2020, 10:09 IST
ಅರವಿಂದ್‌ ಕೇಜ್ರಿವಾಲ್‌
ಅರವಿಂದ್‌ ಕೇಜ್ರಿವಾಲ್‌   

ನವದೆಹಲಿ: ಮೊದಲ ಹಂತದ ಕೋವಿಡ್‌ ಲಸಿಕೆಯನ್ನು ಸ್ವೀಕರಿಸಲು, ಸಂಗ್ರಹಿಸಲು ಮತ್ತು ನೀಡಲು ದೆಹಲಿ ಸರ್ಕಾರ ಸಂಪೂರ್ಣವಾಗಿ ಸಿದ್ಧತೆ ಮಾಡಿಕೊಂಡಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಕೋವಿಡ್‌ ಲಸಿಕೆ ಸಿಗಬೇಕಿದೆ. ಆ ನಂತರ ಆದ್ಯತೆಯ ಮೇರೆಗೆ ದೆಹಲಿಯ ಜನರಿಗೆ ಲಸಿಕೆಯನ್ನು ನೀಡಲಾಗುತ್ತದೆ. ಮೂರು ವಿಭಾಗಗಳಲ್ಲಿರುವ ಜನರ ನೋಂದಣಿ ನಡೆಯುತ್ತಿದೆ. ಅವರು ಮೊದಲು ಲಸಿಕೆಯನ್ನು ಸ್ವೀಕರಿಸಲಿದ್ದಾರೆ ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.

'ದೆಹಲಿಯಲ್ಲಿ ಒಟ್ಟು 51 ಲಕ್ಷ ಜನರು ಆದ್ಯತೆಯ ಮೇರೆಗೆ ಲಸಿಕೆ ಪಡೆಯಲಿದ್ದಾರೆ. ಮೂರು ಲಕ್ಷ ಆರೋಗ್ಯ ಕಾರ್ಯಕರ್ತರು, ಆರು ಲಕ್ಷ ಮುಂಚೂಣಿ ಕಾರ್ಮಿಕರು ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟ 42 ಲಕ್ಷ ಜನರಿಗೆ ಮೊದಲ ಹಂತದಲ್ಲಿ ಲಸಿಕೆ ಸಿಗಲಿದೆ' ಎಂದು ಅರವಿಂದ್‌ ಕೇಜ್ರಿವಾಲ್‌ ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರತಿ ವ್ಯಕ್ತಿಗೆ ಎರಡು ಡೋಸ್‌ಗಳನ್ನು ನೀಡಲಾಗುವುದು. ದೆಹಲಿಯಲ್ಲಿ ಮೊದಲ ಹಂತದ ವ್ಯಾಕ್ಸಿನೇಷನ್‌ಗೆ ಒಟ್ಟು 1.02 ಕೋಟಿ ಡೋಸ್‌ಗಳು ಬೇಕಾಗುತ್ತವೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.