ADVERTISEMENT

ಕೋವಿಡ್‌ ಹೆಚ್ಚಳ: ನಿರ್ವಹಣೆಗೆ ದೆಹಲಿ ಸಜ್ಜು ಎಂದ ಅರವಿಂದ ಕೇಜ್ರಿವಾಲ್

ಪಿಟಿಐ
Published 23 ಡಿಸೆಂಬರ್ 2021, 19:46 IST
Last Updated 23 ಡಿಸೆಂಬರ್ 2021, 19:46 IST
 ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ಪ್ರತಿ ದಿನದ ಕೋವಿಡ್‌ ಪರೀಕ್ಷಾ ಸಾಮರ್ಥ್ಯವನ್ನು ಮೂರು ಲಕ್ಷಕ್ಕೆ ಏರಿಸಲು ಮತ್ತು ಮನೆ ಪ್ರತ್ಯೇಕವಾಸದ ಮಾದರಿಯಲ್ಲಿ ಪ್ರತಿ ದಿನ ಒಂದು ಲಕ್ಷ ಪ್ರಕರಣಗಳನ್ನು ನಿರ್ವಹಿಸಲು ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಓಮೈಕ್ರಾನ್‌ ಸೋಂಕಿನ ಹೆಚ್ಚಿನ ಪ್ರಕರಣಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಬೇಕಾದ ಅಗತ್ಯ ಇಲ್ಲ. ಹಾಗಾಗಿ, ಮನೆ ಪ್ರತ್ಯೇಕವಾಸ ಮಾದರಿಯನ್ನು ಬಲಪಡಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಸಂಸ್ಥೆಯೊಂದನ್ನು ನಿಯೋಜಿಸಲಾಗಿದೆ ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT