ADVERTISEMENT

ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ರಶೀದ್ ಎಂಜಿನಿಯರ್‌ಗೆ 2 ದಿನ ಕಸ್ಟಡಿ ಪೆರೋಲ್

ಪಿಟಿಐ
Published 10 ಫೆಬ್ರುವರಿ 2025, 9:47 IST
Last Updated 10 ಫೆಬ್ರುವರಿ 2025, 9:47 IST
ರಶೀದ್ ಎಂಜಿನಿಯರ್
ರಶೀದ್ ಎಂಜಿನಿಯರ್   

ನವದೆಹಲಿ: ಪ್ರಸ್ತುತ ಜೈಲಿನಲ್ಲಿರುವ ಸಂಸದ ರಶೀದ್ ಎಂಜಿನಿಯರ್ ಅವರು, ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೆಹಲಿ ಹೈಕೋರ್ಟ್ 2 ದಿನಗಳ ಕಸ್ಟಡಿ ಪೆರೋಲ್ ನೀಡಿದೆ.

ಫೆಬ್ರುವರಿ 11 ಮತ್ತು 13 ರಂದು ರಶೀದ್ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಬಹುದು ಎಂದು ನ್ಯಾಯಮೂರ್ತಿ ವಿಕಾಸ್ ಮಹಾಜನ್ ಆದೇಶಿಸಿದ್ದಾರೆ.

ಸೆಲ್‌ಫೋನ್ ಬಳಸದಿರುವುದು ಸೇರಿದಂತೆ ಕೆಲವು ಷರತ್ತುಗಳನ್ನು ವಿಧಿಸಿ ಪೆರೋಲ್‌ ನೀಡಲಾಗಿದೆ.

ADVERTISEMENT

ಬಾರಾಮುಲ್ಲಾ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ರಶೀದ್ ಎಂಜಿನಿಯರ್, ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡಿದ ಆರೋಪದಡಿ 2019ರಿಂದ ತಿಹಾರ್‌ ಜೈಲಿನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.