ನವದೆಹಲಿ: ಜೈಲಿನಲ್ಲಿದ್ದ ಉಗ್ರರ ಬಿಡುಗಡೆಗಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ನಾಲ್ವರು ವಿದೇಶಿ ಪ್ರಜೆಗಳನ್ನು ಅಪಹರಿಸಿದ್ದ ಭಯೋತ್ಪಾದನೆ ಪಿತೂರಿ ಪ್ರಕರಣದ ದೋಷಿಯ ಅವಧಿಪೂರ್ವ ಬಿಡುಗಡೆಗೆ ಕೋರಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ಆತ ಮಾಡಿರುವ ಅಪರಾಧವು ಗಂಭೀರ ಸ್ವರೂಪದ್ದು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.
ಅವಧಿ ಪೂರ್ವ ಬಿಡುಗಡೆ ಕೋರಿದ್ದ ನಾಸಿರ್ ಮಹಮ್ಮದ್ ಸೊದೊಜೆ ಅಲಿಯಾಸ್ ಅಫ್ತಾಬ್ ಅಹ್ಮದ್ ಅರ್ಜಿಯನ್ನು ವಜಾಗೊಳಿಸಿರುವ ಶಿಕ್ಷೆ ಪರಿಶೀಲನಾ ಮಂಡಳಿಯ ನಿರ್ಧಾರದಲ್ಲಿ ಯಾವುದೇ ದೋಷ ಪತ್ತೆಯಾಗಿಲ್ಲ ಎಂದು ಹೈಕೋರ್ಟ್ ತಿಳಿಸಿತು.
ಪ್ರಕರಣದಲ್ಲಿ ಅಪರಾಧಿಗೆ ಮೊದಲು ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ನಂತರ ಸುಪ್ರೀಂ ಕೋರ್ಟ್ 2003ರಲ್ಲಿ ಜೀವಾವಧಿ ಶಿಕ್ಷೆಗೆ ವಿಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.