ADVERTISEMENT

ದೆಹಲಿ: 10 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲು

ಪಿಟಿಐ
Published 3 ನವೆಂಬರ್ 2020, 7:07 IST
Last Updated 3 ನವೆಂಬರ್ 2020, 7:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೆಹಲಿಯಲ್ಲಿ ಮಂಗಳವಾರ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಇದು ಈ ಋತುವಿನಲ್ಲಿ ದಾಖಲಾದ ಅತಿ ಕನಿಷ್ಠ ತಾಪಮಾನ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಬುಧವಾರವೂ ಇದೇ ಸ್ಥಿತಿ ಇದ್ದರೆ ನಗರದಲ್ಲಿ ಶೀತ ಅಲೆಯನ್ನು ಇರುವುದನ್ನು ಘೋಷಿಸಲಾಗುವುದು. ಕಳೆದ ನಾಲ್ಕು–ಐದು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ನವೆಂಬರ್‌ ತಿಂಗಳಿನಲ್ಲಿ ಅತಿ ಹೆಚ್ಚು ಶೀತಗಾಳಿ ಇರಲಿದೆ ಎಂದು ಇಲಾಖೆ ತಿಳಿಸಿದೆ.

ಕಳೆದ ಕೆಲವು ದಿನಗಳಲ್ಲಿ ಕನಿಷ್ಠ ತಾಪಮಾನಗಳು ದಾಖಲಾಗಿವೆ. ಮುಂದಿನ ದಿನಗಳು ಹೀಗೆ ಇರಲಿವೆ ಎಂದು ಸ್ಥಳೀಯ ಐಎಂಡಿ ಕೇಂದ್ರದ ಮುಖ್ಯಸ್ಥ ಕುಲ್‌ದೀಪ್‌ ಶ್ರೀವಾಸ್ತವ್‌ ಅವರು ಮಾಹಿತಿ ನೀಡಿದರು.

ADVERTISEMENT

ಸತತ ಎರಡು ದಿನ 10 ಡಿಗ್ರಿ ಸೆಲ್ಸಿಯಸ್‌ ಅಥವಾ ಅದಕ್ಕಿಂತ ಕಡಿಮೆ ಕನಿಷ್ಠ ತಾಪಮಾನ ದಾಖಲಾದರೆ ಶೀತ ಅಲೆ (ಕೋಲ್ಡ್ ವೇವ್) ಇರುವುದಾಗಿ ಘೋಷಿಸಲಾಗುತ್ತದೆ ಎಂದು ಅವರು ಹೇಳಿದರು.

ಸಾಮಾನ್ಯವಾಗಿ ನವೆಂಬರ್‌ ತಿಂಗಳ ಮೊದಲ ವಾರದಲ್ಲಿ ತಾಪಮಾನವು 14.8 ಡಿಗ್ರಿ ಸೆಲ್ಸಿಯಸ್‌ ಇರುತ್ತದೆ. ನವೆಂಬರ್‌ ತಿಂಗಳಾಂತ್ಯದಲ್ಲಿ ತಾಪಮಾನವು 11–12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ ಎಂದು ಐಎಂಡಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.