ನವದೆಹಲಿ (ಪಿಟಿಐ): ತನ್ನ ಮೇಲೆ ಗುಂಡು ಹಾರಿಸಲಾಗಿದೆ ಎಂಬ ಸುದ್ದಿಯು ಶುದ್ಧ ಸುಳ್ಳು ಎಂದು ದೆಹಲಿ ಪರಿಸರ ಸಚಿವ ಮಂಜೀಂದರ್ ಸಿಂಗ್ ಸಿರ್ಸಾ ಅವರು ಬುಧವಾರ ಹೇಳಿದ್ದಾರೆ. ‘ನನ್ನನ್ನು ಗುರಿಯಾಗಿಸಿ ಗುಂಡು ಹಾರಿಸಲಾಗಿದೆ ಎಂಬ ಗಾಳಿಸುದ್ದಿ ಹರಡುತ್ತಿದೆ’ ಎಂದು ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಹೇಳಿದ್ದಾರೆ.
ಪಶ್ಚಿಮ ದೆಹಲಿಯ ಖ್ಯಾಲಾ ಮತ್ತು ವಿಷ್ಣು ಗಾರ್ಡನ್ ಪ್ರದೇಶದಲ್ಲಿ ಸಿರ್ಸಾ ಅವರು ಸುತ್ತಾಡುತ್ತಿದ್ದಾಗ ಅವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ ಒಂದರಲ್ಲಿ ಪ್ರಕಟಿಸಲಾಗಿದೆ. ಸಿರ್ಸಾ ಅವರು ಬೆಳಗಿನ ಜಾವಾ ಖ್ಯಾಲಾ ಪ್ರದೇಶದ ಬಳಿ ತಿರುಗಾಡುತ್ತಿದ್ದಾಗ ಅವರಿಗಿಂತ ತುಸು ದೂರದಲ್ಲಿ ಖಾಲಿ ಕಾರ್ಟ್ರಿಡ್ಜ್‌ನಂತೆ ಕಾಣುತ್ತಿದ್ದ ಲೋಹದ ತುಂಡು ಬೀದಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ, ಅದು ಹೊಲಿಗೆ ಯಂತ್ರದ ಭಾಗದಂತೆ ಕಾಣುತ್ತದೆ. ಆದಾಗ್ಯೂ, ಅದನ್ನು ಮತ್ತಷ್ಟು ಪರಿಶೀಲಿಸಲಾಗುತ್ತಿದೆ. ಪೊಲೀಸರು ಪ್ರದೇಶವನ್ನು ಸ್ಕ್ಯಾನ್ ಮಾಡಿದ್ದು, ಈ ರೀತಿಯ ಯಾವುದೇ ಘಟನೆ ನಡೆದಿರುವ ಸುಳಿವು ದೊರಕಿಲ್ಲ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.