ADVERTISEMENT

ಉಗ್ರ ದಾಳಿ ಸುಳಿವು: ದೆಹಲಿಯಲ್ಲಿ ಹೈ ಅಲರ್ಟ್

ಪಿಟಿಐ
Published 22 ಜೂನ್ 2020, 5:03 IST
Last Updated 22 ಜೂನ್ 2020, 5:03 IST
ದೆಹಲಿಯಲ್ಲಿ ಕಟ್ಟೆಚ್ಚರ (ಸಾಂದರ್ಭಿಕ ಚಿತ್ರ)
ದೆಹಲಿಯಲ್ಲಿ ಕಟ್ಟೆಚ್ಚರ (ಸಾಂದರ್ಭಿಕ ಚಿತ್ರ)   

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಬಗ್ಗೆ ಗುಪ್ತಚರ ಸುಳಿವು ದೊರೆತಿದ್ದು, ಕಟ್ಟೆಚ್ಚರ ಘೋಷಿಸಲಾಗಿದೆ ಎಂದು ಮೂಲಗಳು ಹೇಳಿವೆ.

ದಾಳಿ ನಡೆಸುವ ಸಂಚಿನೊಂದಿಗೆ ನಾಲ್ವರಿಂದ ಐವರು ಉಗ್ರರು ದೆಹಲಿಗೆ ನುಸುಳಿರುವ ಶಂಕೆಯಿದೆ ಎಂದು ಗುಪ್ತಚರ ಏಜೆನ್ಸಿಗಳು ದೆಹಲಿ ಪೊಲೀಸರನ್ನು ಎಚ್ಚರಿಸಿವೆ. ಕ್ರೈಂ ಬ್ರಾಂಚ್, ವಿಶೇಷ ದಳ ಸೇರಿದಂತೆ ದೆಹಲಿಯ 15 ಪೊಲೀಸ್ ವಿಭಾಗಗಳಲ್ಲೂ ಕಟ್ಟೆಚ್ಚರ ಘೋಷಿಸಲಾಗಿದೆ.

ದೆಹಲಿಯ ಗಡಿ ಭಾಗಗಳಲ್ಲಿ ವಿಶೇಷ ನಿಗಾ ವಹಿಸಲಾಗುತ್ತಿದೆ. ಮಾರುಕಟ್ಟೆ ಪ್ರದೇಶ, ಹೆಚ್ಚು ರೋಗಿಗಳಿರುವ ಆಸ್ಪತ್ರೆ ಮತ್ತಿತರ ಕಡೆಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ.

ADVERTISEMENT

ಪೂರ್ವ ಲಡಾಖ್‌ನಲ್ಲಿ ಭಾರತ–ಚೀನಾ ಸೇನಾ ಪಡೆಗಳ ಮುಖಾಮುಖಿ ಮಧ್ಯೆಯೇ ಈ ಸುಳಿವು ದೊರೆತಿರುವುದರಿಂದ ಭದ್ರತಾ ಏಜೆನ್ಸಿಗಳು ಮತ್ತಷ್ಟು ಎಚ್ಚರಿಕೆ ವಹಿಸಿವೆ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.