
ಬಾಂಬ್ ಬೆದರಿಕೆ ಹಿನ್ನೆಲೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತಪಾಸಣೆ ನಡೆಸಿದರು
ನವದೆಹಲಿ: ಫೆಬ್ರುವರಿ 13ರಂದು ಮಧ್ಯಾಹ್ನ 1.11ಕ್ಕೆ ಸಂಸತ್ತಿನಲ್ಲಿ ಸ್ಫೋಟ ನಡೆಯಲಿದೆ, ದೆಹಲಿ ಖಾಲಿಸ್ತಾನ ಆಗಲಿದೆ ಎಂದು ಉಲ್ಲೇಖಿಸಿ ದೆಹಲಿಯ 9ಕ್ಕೂ ಹೆಚ್ಚು ಶಾಲೆಗಳಿಗೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಹಾಕಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇ–ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿರುವುದಾಗಿ ಶಿಕ್ಷಣ ಸಂಸ್ಥೆಗಳು ದೂರು ನೀಡಿವೆ. ಕೂಡಲೇ ಅಗ್ನಿಶಾಮಕ ದಳ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ತಪಾಸಣೆ ನಡೆಸಿದ್ದಾರೆ ಎಂದು ಡಿಎಫ್‌ಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ದೆಹಲಿ ಖಾಲಿಸ್ತಾನ ಆಗಲಿದೆ. ಪಂಜಾಬ್ ಖಾಲಿಸ್ತಾನ. ಅಫ್ಜಲ್ ಗುರುವಿನ ನೆನಪಿಗಾಗಿ’ ಎಂದು ಇ–ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಆರೋಪಿಸಲಾಗಿದೆ.
ದೆಹಲಿ ಕಂಟ್ಮೊನ್ಮೆಂಟ್‌ನ ಲೊರೆಟೊ ಕಾನ್ವೆಂಟ್ ಶಾಲೆ, ಶ್ರೀನಿವಾಸಪುರಿಯ ಕೇಂಬ್ರಿಡ್ಜ್ ಶಾಲೆ, ನ್ಯೂ ಫ್ರೆಂಡ್ಸ್ ಕಾಲೋನಿ, ಸಾದಿಕ್ ನಗರದ ದಿ ಇಂಡಿಯನ್ ಸ್ಕೂಲ್, ಐಎನ್‌ಎಯ ಡಿಟಿಇಎ ಶಾಲೆ, ರೋಹಿಣಿಯ ವೆಂಕಟೇಶ್ವರ ಗ್ಲೋಬಲ್ ಸ್ಕೂಲ್, ಸಿಎಂ ಶ್ರೀಐ ಶಾಲೆ, ಬಾಲ ಭಾರತಿ ಶಾಲೆಗೆ ಬಾಂಬ್ ಬೆದರಿಕೆ ಬಂದಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.