ADVERTISEMENT

ದೆಹಲಿ ಗಲಭೆ: ಆರೋಪ ಪಟ್ಟಿಯಲ್ಲಿ ಯೆಚೂರಿ, ಯೋಗೆಂದ್ರ ಯಾದವ್‌ ಹೆಸರು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 16:33 IST
Last Updated 12 ಸೆಪ್ಟೆಂಬರ್ 2020, 16:33 IST
ಯೋಗೇಂದ್ರ ಯಾದವ್‌, ಸೀತಾರಾಂ ಯೆಚೂರಿ
ಯೋಗೇಂದ್ರ ಯಾದವ್‌, ಸೀತಾರಾಂ ಯೆಚೂರಿ   

ದೆಹಲಿ: ಫೆಬ್ರುವರಿಯಲ್ಲಿ ನಡೆದ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿದ ಪೂರಕ ಚಾರ್ಜ್‌ಶೀಟ್‌ನಲ್ಲಿ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸ್ವರಾಜ್‌ ಅಭಿಯಾನ ಮುಖಂಡ ಯೋಗೆಂದ್ರ ಯಾದವ್‌ ಸೇರಿದಂತೆ ಹಲವರ ಹೆಸರನ್ನು ಸೇರಿಸಿದ್ದಾರೆ.

ಇವರಿಬ್ಬರ ಜತೆ ಅರ್ಥಶಾಸ್ತ್ರಜ್ಞೆಜಯಂತಿ ಘೋಷ್‌, ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಕಾರ್ಯಕರ್ತ ಅಪೂರ್ವಾನಂದ ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕ ರಾಹುಲ್‌ ರಾಯ್‌ ಅವರನ್ನು ಸಹ ಸಂಚುಕೋರರು ಎಂದು ಪೊಲೀಸರು ಹೆಸರಿಸಿದ್ದಾರೆ.

ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಫೆಬ್ರುವರಿಯಲ್ಲಿ ನಡೆದ ಪ್ರತಿಭಟನೆಗೆ ಇವೆರೆಲ್ಲರೂ ಕುಮ್ಮಕ್ಕು ನೀಡಿದ್ದಾರೆ ಎಂದು ಚಾರ್ಜ್‌ಶೀಟ್‌ಲ್ಲಿ ಆರೋಪಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.