ADVERTISEMENT

ದೆಹಲಿ: ಕಂಟೇನ್‌ಮೆಂಟ್‌ ವಲಯ ಸಂಖ್ಯೆ ಶೇ 70ರಷ್ಟು ಏರಿಕೆ

ಜೂನ್‌ ನಂತರ ರಾಷ್ಟ್ರರಾಜಧಾನಿಯಲ್ಲಿ ಸೋಂಕು ಹೆಚ್ಚಳ

ಪಿಟಿಐ
Published 25 ಜೂನ್ 2022, 14:07 IST
Last Updated 25 ಜೂನ್ 2022, 14:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ಪ್ರಮಾಣ ಏರುಮುಖವಾಗಿದ್ದು, ಜೂನ್‌ 17ರಿಂದ ಜೂನ್‌ 24ರ ವರೆಗೆ ನಗರದಲ್ಲಿ ಕಂಟೇನ್‌ಮೆಂಟ್‌ ವಲಯಗಳ ಸಂಖ್ಯೆ 190ರಿಂದ 322ಕ್ಕೆ ಏರಿಕೆಯಾಗಿದೆ. ಅಂದರೆ ಶೇ 70ರಷ್ಟು ಏರಿಕೆಯಾಗಿದೆ.

ಕುಟುಂಬ, ನೆರೆಹೊರೆಯ ಸಂಪರ್ಕದಿಂದಲೇ ಹಲವು ಪ್ರಕರಣಗಳು ದೃಢಪಡುತ್ತಿವೆ. ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಒಂದು ಅಥವಾ ಎರಡು ಮನೆಗಳನ್ನು ಒಳಗೊಂಡ ಮೈಕ್ರೊ ಕಂಟೇನ್‌ಮೆಂಟ್‌ ವಲಯ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾನ್ಯವಾಗಿ ಮೂರಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾದ ಪ್ರದೇಶವನ್ನು ಕಂಟೇನ್‌ಮೆಂಟ್‌ ವಲಯವಾಗಿ ಮಾಡಲಾಗುತ್ತಿದೆ. ಈ ಪ್ರದೇಶಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ADVERTISEMENT

ದೆಹಲಿಯಲ್ಲಿ ಜೂನ್‌ 14ರ ಬಳಿಕ ಕೋವಿಡ್ ಸೋಂಕು ಪ್ರಮಾಣ ಏರಿಕೆಯಾಗುತ್ತಿದ್ದು, ನಿತ್ಯ ಸರಾಸರಿ 1000 ಪ್ರಕರಣಗಳು ಪತ್ತೆಯಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.