
ದೆಹಲಿಯಲ್ಲಿ ತಾಪಮಾನ ಇಳಿಕೆ
ಪಿಟಿಐ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಕನಿಷ್ಠ ತಾಪಮಾನ 8.7 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಗಾಳಿಯ ಗುಣಮಟ್ಟವೂ ತೀವ್ರ ಕಳಪೆ ಮಟ್ಟಕ್ಕೆ ಕುಸಿದಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
ಐದು ಮೇಲ್ವಿಚಾರಣಾ ಕೇಂದ್ರಗಳು ಗಾಳಿಯ ಗುಣಮಟ್ಟ ‘ಗಂಭೀರ’ವಾಗಿದೆ ಎಂದು ವರದಿ ನೀಡಿದ್ದು, 29 ಕೇಂದ್ರಗಳು 300 ರಿಂದ 400 ರ ನಡುವೆ ಎಕ್ಯೂಐ ಸೂಚ್ಯಂಕ ಅಂದರೆ ‘ಕಳಪೆ ಮಟ್ಟದಲ್ಲಿವೆ ಎಂದು ಸೂಚಿಸಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಬೆಳಿಗ್ಗೆ 8.30 ರ ವೇಳೆಗೆ ಕನಿಷ್ಠ ತಾಪಮಾನ 8.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಸಾಮಾನ್ಯಕ್ಕಿಂತ 3.6 ಡಿಗ್ರಿ ಕಡಿಮೆಯಾಗಿದೆ.
ಈ ಹಿಂದೆ 2022ರ ನ.29ರಂದು ಕನಿಷ್ಠ ತಾಪಮಾನ 7.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. 2023ರಲ್ಲಿ ಕನಿಷ್ಠ ಎಂದರೆ 9.2 ಡಿಗ್ರಿ ಸೆಲ್ಸಿಯಸ್ ಮತ್ತು 2024ರಲ್ಲಿ 9.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.