ADVERTISEMENT

ಸಹಜೀವನ ಸಂಗಾತಿಯಿಂದ ಬೆಂಕಿ: ಮಹಿಳೆ ಸಾವು

ಪಿಟಿಐ
Published 21 ಫೆಬ್ರುವರಿ 2023, 14:48 IST
Last Updated 21 ಫೆಬ್ರುವರಿ 2023, 14:48 IST
.
.   

ನವದೆಹಲಿ (ಪಿಟಿಐ): ವಾಯುವ್ಯ ದೆಹಲಿಯ ಅಮನ್‌ ವಿಹಾರ್‌ನಲ್ಲಿ ಸಹಜೀವನ ಸಂಗಾತಿಯೇ ಬೆಂಕಿ ಹಚ್ಚಿದ್ದ ಕಾರಣ ತೀವ್ರ ಗಾಯಗೊಂಡಿದ್ದ 28 ವರ್ಷದ ಮಹಿಳೆ ಸೋಮವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಫೆ.11ರಂದು ಮಹಿಳೆ ಸುಟ್ಟ ಗಾಯಗಳಿಂದ ಎಸ್‌ಜಿಎಂ ಆಸ್ಪತ್ರೆ ಸೇರಿರುವ ಮಾಹಿತಿ ಲಭ್ಯವಾಗಿತ್ತು. ಆದರೆ ಸಂತ್ರಸ್ತೆ ಹೇಳಿಕೆ ನೀಡುವಷ್ಟು ಶಕ್ತರಾಗಿರಲಿಲ್ಲ. ಬಳಿಕ ಆಕೆಯನ್ನು ಬಲ್ಬೀರ್‌ ವಿಹಾರ್‌ ನಿವಾಸಿ ಎಂದು ಗುರುತಿಸಲಾಯಿತು. ಮಹಿಳೆಯು ಪತಿಯನ್ನು ತೊರೆದು ಕಳೆದ ಆರು ವರ್ಷಗಳಿಂದ ಅರೋಪಿ ಮೋಹಿತ್‌ ಜೊತೆ ವಾಸಿಸುತ್ತಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ. ಆಕೆಗೆ ಇಬ್ಬರು ಮಕ್ಕಳಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬಸ್ಥರ ಹೇಳಿಕೆ ಆಧಾರದಲ್ಲಿ ಮೋಹಿತ್‌ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಫೆ.10ರಂದು ಆರೋಪಿ ಮೋಹಿತ್‌ ಮಾದಕ ವಸ್ತು ಸೇವನೆ ಮಾಡಿದ ವಿಚಾರಕ್ಕೆ ಸಂತ್ರಸ್ತ ಮಹಿಳೆಯೊಂದಿಗೆ ವಾಗ್ವಾದ ನಡೆದಿತ್ತು. ಆರೋಪಿ ಆಕೆಯ ಮೇಲೆ ಟಾರ್ಪಿನ್‌ ಆಯಿಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ಸಂಬಂಧಿಸಿದಂತೆ ಮೋಹಿತ್‌ನನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.