ನವದೆಹಲಿ: ಕೋವಿಡ್‌ಗೆ ಕಾರಣವಾಗುವ ‘ಸಾರ್ಸ್–ಕೋವ್–2’ ವೈರಸ್‌ನ ನೂತನ ‘ಡೆಲ್ಟಾ ಪ್ಲಸ್’ ತಳಿ ಬಗ್ಗೆ ಸದ್ಯಕ್ಕೆ ಕಳವಳಪಡುವ ಅಗತ್ಯವಿಲ್ಲ. ವೈರಸ್‌ನ ಈ ತಳಿ ಎಷ್ಟು ಮಾರಕ ಹಾಗೂ ಇದರ ಪ್ರಸರಣದ ತೀವ್ರತೆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿನೋದ್ ಪೌಲ್ ಮಂಗಳವಾರ ಹೇಳಿದ್ದಾರೆ.
‘ಸದ್ಯಕ್ಕೆ ಈ ತಳಿಯನ್ನು ‘ಕುತೂಹಲಕಾರಿ’ ಎನ್ನಲಾಗಿದ್ದು, ಕಳವಳಕಾರಿ ಎಂಬುದಾಗಿ ವರ್ಗೀಕರಣ ಮಾಡಿಲ್ಲ. ಸದ್ಯ ಲಭ್ಯವಿರುವ ವರದಿಗಳ ಪ್ರಕಾರ, ದೇಶದಲ್ಲಿ ಈ ತಳಿಯ 8 ಸೋಂಕಿನ ಪ್ರಕರಣಗಳು ಮಾತ್ರ ಕಂಡುಬಂದಿವೆ’ ಎಂದು ಅವರು ಹೇಳಿದ್ದಾರೆ.
ಕೊರೊನಾ ವೈರಸ್‌ನ ನೂತನ ತಳಿಯನ್ನು ‘ಡೆಲ್ಟಾ ಪ್ಲಸ್’ ಅಥವಾ ‘ಎವೈ.1’ ಎಂದು ಹೆಸರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.