ADVERTISEMENT

ವಾಟ್ಸ್ಆ್ಯಪ್‌‍ನಲ್ಲಿ ಹನುಮಂತನ 'ಆಕ್ಷೇಪಾರ್ಹ' ಚಿತ್ರ: ದಲಿತ ಯುವಕ ಬಂಧನ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 13:45 IST
Last Updated 9 ಡಿಸೆಂಬರ್ 2018, 13:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭೋಪಾಲ್: ವಾಟ್ಸ್ಆ್ಯಪ್‍ನಲ್ಲಿ ಹನುಮಂತನ ಆಕ್ಷೇಪಾರ್ಹ ಚಿತ್ರ ಪೋಸ್ಟ್ ಮಾಡಿದ ದಲಿತ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶದ ಬುಂದೇಲ್‍ಖಂಡ ಪ್ರದೇಶದ ನಿವಾಸಿಯಾದ ಹದಿಹರೆಯದ ಯುವಕನೊಬ್ಬ ಶನಿವಾರ ಆಕ್ಷೇಪಾರ್ಹ ಚಿತ್ರವನ್ನು ಪೋಸ್ಟ್ ಮಾಡಿದ್ದನು.

ಬಜರಂಗದಳದ ಸದಸ್ಯ ಹೇಮರಾಜ್ ಠಾಕೂರ್ ಎಂಬವರು ಶುಕ್ರವಾರ 17ರ ಹರೆಯದ ಯುವಕನ ವಿರುದ್ಧ ದೂರು ನೀಡಿದ್ದರು.ಆ ಯುವಕ ಅಂಬೇಡ್ಕರ್ ಚಿತ್ರದ ಜತೆಗೆ ಹನುಮಾನ್ ಚಿತ್ರ ಪ್ರಕಟಿಸಿದ್ದು, ಅದರಲ್ಲಿ ಹನುಮಾನ್ ಆಕ್ಷೇಪಾರ್ಹ ಮಾತುಗಳನ್ನು ಹೇಳುತ್ತಿರುವುದು ಚಿತ್ರಿಸಲಾಗಿದೆ.ಈ ಮೂಲಕ ಆತ ನಮ್ಮ ಭಾವನೆಗಳಿಗೆ ಧಕ್ಕೆ ಉಂಟ ಮಾಡಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ ಐಎಸ್ ಠಾಕೂರ್, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಯುವಕನ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ಪ್ರಾಥಮಿಕ ತನಿಖೆ ನಡೆಸಲಾಗುವುದು ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.