ನವದೆಹಲಿ: ದೇಶದ ವಾಯುಯಾನ ವ್ಯವಸ್ಥೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲ ಸಂಕೀರ್ಣ ಮೌಲ್ಯಮಾಪನವನ್ನು ಕೈಬಿಟ್ಟು, ‘ಸಮಗ್ರ ವಿಶೇಷ ಮೌಲ್ಯಮಾಪನ’ಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮುಂದಾಗಿದೆ.
ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ಮಾನದಂಡಗಳು ಹಾಗೂ ದೇಶದ ವಾಯುಯಾನಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದನ್ನು ಖಚಿತಪಡಿಸುವ ಈ ವಿಶೇಷ ಮೌಲ್ಯಮಾಪನವು, ವಾರ್ಷಿಕ ಮೌಲ್ಯಮಾಪನಕ್ಕಿಂತ ಭಿನ್ನವಾಗಿರಲಿದೆ.
ಏರ್ ಇಂಡಿಯಾದ ಬೋಯಿಂಗ್ 787–8 ಡ್ರೀಮ್‌ಲೈನರ್ ವಿಮಾನವು ಅಹಮದಾಬಾದ್‌ನಲ್ಲಿ ಪತನಕ್ಕೀಡಾದ ವಾರದ ನಂತರ, ಡಿಜಿಸಿಎ ಫೈಜ್ ಅಹಮದ್ ಕಿದ್ವಾಯಿ ಅವರು ‘ಸಮಗ್ರ ವಿಶೇಷ ಮೌಲ್ಯಮಾಪನ’ಕ್ಕೆ ಸಂಬಂಧಿಸಿದ ವಿವರಣೆಯುಳ್ಳ ಸುತ್ತೋಲೆಯನ್ನು ಜೂನ್ 19ರಂದು ಹೊರಡಿಸಿದ್ದಾರೆ.
ದುರಂತ ಸಂಭವಿಸಿದಾಗ ಈ ಮೌಲ್ಯಮಾಪನ ಕೈಗೊಳ್ಳಬಹುದಾಗಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.