ADVERTISEMENT

ಅ.15ರಿಂದ ವಿಮಾನ ಪೈಲಟ್‌, ಸಿಬ್ಬಂದಿಗೆ ಉಸಿರಾಟ ವಿಶ್ಲೇಷಣಾ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 15:38 IST
Last Updated 14 ಸೆಪ್ಟೆಂಬರ್ 2022, 15:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿ ಸೇರಿ ಎಲ್ಲ ವಿಮಾನ ಸಿಬ್ಬಂದಿ ಉಸಿರಾಟದ ವಿಶ್ಲೇಷಣಾ ಪರೀಕ್ಷೆಗೆ ಕಡ್ಡಾಯವಾಗಿ ಒಳಪಡುವುದು ಅಕ್ಟೋಬರ್ 15ರಿಂದ ಪುನಃ ಜಾರಿಗೆ ಬರಲಿದೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಹೇಳಿದೆ.

ಪರೀಕ್ಷೆಗಳಿಗೆ ಅಗತ್ಯ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ವಿಮಾನಯಾನ ಸಂಸ್ಥೆಗಳು ಮತ್ತು ಸಂಬಂಧಿತ ಇತರ ಸಂಸ್ಥೆಗಳಿಗೆ ಸಮಯಾವಕಾಶನೀಡಲಾಗಿದೆ.

ಕೋವಿಡ್‌ 19 ಸಾಂಕ್ರಾಮಿಕದ ಕಾರಣಕ್ಕಾಗಿ ಹೇರಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ವಿಮಾನದ ಯಾವುದೇ ಸಿಬ್ಬಂದಿ ಮದ್ಯ ಸೇವಿಸಿದ್ದಾರೆಯೇ ಎಂದು ಉಸಿರಾಟದ ವಿಶ್ಲೇಷಣಾ ಪರೀಕ್ಷೆಗೆ ಒಳಪಡಿಸುವುದುಸಾಂಕ್ರಾಮಿಕ ರೋಗದ ನಡುವೆ ಶೇ 50ಕ್ಕೆ ಮಾತ್ರ ಸೀಮಿತವಾಗಿತ್ತು.

ADVERTISEMENT

ಯಾರಲ್ಲಾದರೂ ಕೋವಿಡ್-19 ಲಕ್ಷಣಗಳು ಕಂಡುಬಂದಲ್ಲಿ, ಅವರನ್ನು ಬಿಎ (ಬ್ರೆತ್ ವಿಶ್ಲೇಷಕ) ಪರೀಕ್ಷೆಯಿಂದ ವಿನಾಯಿತಿ ನೀಡಿ, ಅವರನ್ನು ಕರ್ತವ್ಯದಿಂದ ತೆಗೆದುಹಾಕಲಾಗುತ್ತದೆ. ಅಂತಹ ವ್ಯಕ್ತಿಯು ಅಗತ್ಯ ಪರೀಕ್ಷೆಗೆ ಒಳಗಾಗಬೇಕು ಮತ್ತು ಸಂಪೂರ್ಣ ಗುಣಮುಖವಾಗಿ ಕೆಲಸ ಮಾಡಲು ಸಮರ್ಥರಿದ್ದಾರೆಂದು ವೈದ್ಯರು ದೃಢಪಡಿಸಿದ ನಂತರವೇ ಕರ್ತವ್ಯಕ್ಕೆ ಮರಳಬೇಕು. ಇಂತಹ ಎಲ್ಲ ಪ್ರಕರಣಗಳಲ್ಲೂ ದಾಖಲೆಗಳ ನಿರ್ವಹಣೆ ಅಗತ್ಯ ಎಂದು ಡಿಜಿಸಿಎ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.