ADVERTISEMENT

ಧನಬಾದ್‌ ನ್ಯಾಯಾಧೀಶರ ಹತ್ಯೆ ಪ್ರಕರಣ: ಇಬ್ಬರಿಗೆ ಜೀವನಪರ್ಯಂತ ಜೈಲು

ಪಿಟಿಐ
Published 13 ಆಗಸ್ಟ್ 2022, 16:17 IST
Last Updated 13 ಆಗಸ್ಟ್ 2022, 16:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಾಂಚಿ (ಜಾರ್ಖಂಡ್‌): ಧನ್‌ಬಾದ್‌ ನ್ಯಾಯಾಧೀಶರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೊ ಚಾಲಕ ಮತ್ತು ಆತನ ಸಹಚರನಿಗೆ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯವು ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಿದೆ.

‘ಇಂತಹ ಆರೋಪಿಗಳನ್ನು ಅವರ ಬದುಕಿನ ಕೊನೆಯವರೆಗೂ ಜೈಲಿನಲ್ಲಿರಿಸಬೇಕು’ ಎಂದೂ ತೀರ್ಪು ಪ್ರಕಟಿಸುವಾಗ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.ಇಬ್ಬರು ಅಪರಾಧಿಗಳಿಗೆ ತಲಾ ₹20 ಸಾವಿರ ದಂಡ ವಿಧಿಸಲಾಗಿದೆ.

ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದ49 ವರ್ಷದ ನ್ಯಾಯಾಧೀಶ ಉತ್ತಮ್‌ ಆನಂದ್‌ ಅವರನ್ನು ಹತ್ಯೆ ನಡೆಸಿದ ಪ್ರಕರಣದಲ್ಲಿ ಆಟೊ ಚಾಲಕ ಲಖನ್‌ ವರ್ಮಾ ಮತ್ತು ಆತನ ಸಹಚರ ರಾಹುಲ್‌ ವರ್ಮಾ ದೋಷಿಗಳೆಂದು ಸಿಬಿಐ ನ್ಯಾಯಾಲಯದ ನ್ಯಾಯಾಧೀಶರಾದ ರಜನಿಕಾಂತ್‌ ಪಾಠಕ್‌ ಅವರು ಜುಲೈ 28ರಂದು ತೀರ್ಪು ನೀಡಿದ್ದರು.

ADVERTISEMENT

‘ನ್ಯಾಯಾಧೀಶರೊಬ್ಬರು ಈ ರೀತಿ ಹತ್ಯೆಗೀಡಾಗುತ್ತಾರೆ ಎಂದು ಯಾರೂ ಭಾವಿಸಿರಲಾರರು. ಈ ಘಟನೆಯು ಇಡೀ ನ್ಯಾಯಾಂಗ ವ್ಯವಸ್ಥೆಯನ್ನೇ ಬೆಚ್ಚಿ ಬೀಳಿಸಿದೆ’ ಎಂದೂ ರಜನಿಕಾಂತ್‌ ಪಾಠಕ್‌ ಹೇಳಿದ್ದಾರೆ.

ಕಳೆದ ವರ್ಷ ಜುಲೈ 28ರಂದು ಉತ್ತಮ್‌ ಆನಂದ್‌ ಅವರು ವಾಯುವಿಹಾರ ನಡೆಸುತ್ತಿದ್ದ ವೇಳೆ ಅವರಿಗೆ ಆಟೊ ಡಿಕ್ಕಿ ಹೊಡೆದಿತ್ತು. ಅಂದೇ ಅವರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.