ADVERTISEMENT

ಮಧ್ಯಪ್ರದೇಶ: ಗಣಿ ಪ್ರದೇಶದಲ್ಲಿ ಮೂರು ವಜ್ರಗಳು ಪತ್ತೆ

ಪಿಟಿಐ
Published 17 ಸೆಪ್ಟೆಂಬರ್ 2025, 9:26 IST
Last Updated 17 ಸೆಪ್ಟೆಂಬರ್ 2025, 9:26 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಪನ್ನಾ: ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಗಣಿ ಪ್ರದೇಶದಲ್ಲಿ ಬುಡಕಟ್ಟು ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಮೂರು ವಜ್ರಗಳು ದೊರಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬದ್ವಾರ ಗ್ರಾಮದ ನಿವಾಸಿ ಶಂಬು ಅವರ ಪತ್ನಿ ವಿನಿತಾ ಗೊಂಡ್ ಅವರು ಗಣಿ ಪ್ರದೇಶವನ್ನು ಗುತ್ತಿಗೆ ತೆಗೆದುಕೊಂಡಿದ್ದಾರೆ. ಇಲ್ಲೆ ಅಗೆಯುವಾಗ ಮಹಿಳೆಯೊಬ್ಬರಿಗೆ, ಕ್ರಮವಾಗಿ 0.7 ಕ್ಯಾರೆಟ್, 0.20 ಕ್ಯಾರೆಟ್ ಮತ್ತು 1.48 ಕ್ಯಾರೆಟ್ ತೂಕದ ಮೂರು ಬಣ್ಣವಿಲ್ಲದ ವಜ್ರದ ತುಣುಕುಗಳು ಪತ್ತೆಯಾಗಿವೆ. ಇವುಗಳನ್ನು ಹರಾಜಿಗೆ ಇಡಲಾಗುವುದು. ಅಲ್ಲಿ ಅವುಗಳ ನಿಜವಾದ ಬೆಲೆ ತಿಳಿಯುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ADVERTISEMENT

ಮಹಿಳೆಗೆ ಸಿಕ್ಕ ಮೂರು ವಜ್ರಗಳಲ್ಲಿ ಒಂದು ವಜ್ರ ಅತ್ಯುತ್ತಮ ಗುಣಮಟ್ಟದ್ದಾಗಿದೆ. ಉಳಿದ ಎರಡು ಕಡಿಮೆ ಗುಣಮಟ್ಟದ್ದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.