ADVERTISEMENT

ಕೇಂದ್ರ ಸರ್ಕಾರದ ಪಿಪಿಇ ಕಿಟ್‌‌ಗಳು ಇನ್ನೂ ದೆಹಲಿಗೆ ತಲುಪಿಲ್ಲ: ಆರೋಗ್ಯ ಸಚಿವ

ಏಜೆನ್ಸೀಸ್
Published 6 ಏಪ್ರಿಲ್ 2020, 6:58 IST
Last Updated 6 ಏಪ್ರಿಲ್ 2020, 6:58 IST
ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್
ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್   

ದೆಹಲಿ: ಕೇಂದ್ರ ಸರ್ಕಾರ 27,000 ಪಿಪಿಇ ( ಪರ್ಸನಲ್ ಪ್ರೊಟೆಕ್ಟಿವ್ ಎಕ್ವಿಪ್ಮೆಂಟ್) ಕಿಟ್‌‌ಗಳನ್ನು ಕೊಡುತ್ತೇವೆ ಎಂದು ಹೇಳಿದೆ. ನಿನ್ನೆಯವರೆಗೂ ನಮಗೆ ತಲುಪಿಲ್ಲ. ಇಂದು ನಮ್ಮ ಕೈಸೇರುವ ಸಾಧ್ಯತೆ ಇದೆ ಎಂದು ದೆಹಲಿಯ ಆರೋಗ್ಯ ಸಚಿವ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.

ಒಟ್ಟು ಪತ್ತೆಯಾಗಿರುವ ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ 70ಜನರ ಸಂಪರ್ಕದಲ್ಲಿದ್ದವರನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಈ ದಿನ ಸಂಜೆಯೊಳಗೆ ಇವರನ್ನೂ ಪತ್ತೆಹಚ್ಚಲಾಗುವುದು. ತಬ್ಲಿಗಿ ಜಮಾತ್‌ನಲ್ಲಿ ಭಾಗವಹಿಸಿದವರಲ್ಲಿ ಹಲವರನ್ನು ಪತ್ತೆ ಹಚ್ಚಲಾಗಿದೆ. ಸಿಕ್ಕಿದವರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT