
ಇಂದೋರ್: 1947ರ ದೇಶ ವಿಭಜನೆಗೆ ಮೊಹಮ್ಮದ್ ಅಲಿ ಜಿನ್ನಾ ಹಾಗೂ ಹಿಂದುತ್ವ ಪ್ರತಿಪಾದಕ ವಿ.ಡಿ ಸಾವರ್ಕರ್ ಕಾರಣ. ಈಗ ಆಡಳಿತರೂಢ ಬಿಜೆಪಿ ನಗರ ಹಾಗೂ ನೆರೆಹೊರೆಯವರನ್ನು ವಿಭಜಿಸುತ್ತಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಹೇಳಿದ್ದಾರೆ.
ರಾಜ್ಯದ ಸಾಗರ್ ನಗರದ ಮುಸ್ಲಿಂ ಬಾಹುಳ್ಯದ ಎರಡು ಪ್ರದೇಶಗಳಿಂದ ಹಿಂದೂಗಳು ವಲಸೆ ಹೋಗುತ್ತಿದ್ದಾರೆ ಎಂಬ ಮಾಧ್ಯಮ ವರದಿಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಗುರುವಾರ ಅವರು ಹೀಗೆ ಉತ್ತರಿಸಿದ್ದಾರೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯಂದು ಶುಕ್ರವಾರ (ಅಕ್ಟೋಬರ್ 31) ಬಿಜೆಪಿ ಆಯೋಜಿಸಿರುವ 'ಏಕತಾ ಓಟ'ದ ಕುರಿತ ಪ್ರಶ್ನೆಗೆ, ‘ನಾವು ಈ ಕಾರ್ಯಕ್ರಮವನ್ನು ಸ್ವಾಗತಿಸುತ್ತೇವೆ. ಆದರೆ ಅಕ್ಟೋಬರ್ 31 ಹುತಾತ್ಮರ ದಿನವೂ ಕೂಡ’ ಎಂದು ಅವರು ಹೇಳಿದ್ದಾರೆ.
1984 ರ ಅಕ್ಟೋಬರ್ 31 ರಂದು ತಮ್ಮ ಅಂಗರಕ್ಷಕರಿಂದ ಹತ್ಯೆಗೀಡಾದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಉಲ್ಲೇಖಿಸಿ ಅವರು ಈ ಮಾತು ಹೇಳಿದ್ದಾರೆ.
ದೇಶದಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯ ನೆಪದಲ್ಲಿ ‘ಪೌರತ್ವದ ಪುರಾವೆಗಳನ್ನು‘ ಸಂಗ್ರಹಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಯಾವುದೇ ದೂರುಗಳು ದಾಖಲಾಗದಿದ್ದರೂ, ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಈಗಾಗಲೇ ಮೂರು ಅಥವಾ ನಾಲ್ಕು ಬಾರಿ ಮತ ಚಲಾಯಿಸಿದ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಏಕೆ ತೆಗೆದುಹಾಕುತ್ತಿದ್ದಾರೆ? ಡಬಲ್ ಎಂಜಿನ್ ಸರ್ಕಾರಗಳಲ್ಲಿ, ಬಿಎಲ್‌ಒಗಳು ಬಿಜೆಪಿ ಕಾರ್ಯಕರ್ತರಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.