ADVERTISEMENT

ತಮಿಳುನಾಡು ಚುನಾವಣೆ: ಸ್ಟಾಲಿನ್‌ ಅನರ್ಹಕ್ಕೆ ಎಐಎಡಿಎಂಕೆ ಆಗ್ರಹ

ಪಿಟಿಐ
Published 5 ಏಪ್ರಿಲ್ 2021, 19:31 IST
Last Updated 5 ಏಪ್ರಿಲ್ 2021, 19:31 IST
ಎಂ.ಕೆ. ಸ್ಟಾಲಿನ್
ಎಂ.ಕೆ. ಸ್ಟಾಲಿನ್    

ಚೆನ್ನೈ: ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಮತ್ತು ಅವರ ಪಕ್ಷದ ನಾಲ್ವರು ಅಭ್ಯರ್ಥಿಗಳನ್ನು ಸ್ಪರ್ಧೆಯಿಂದ ಅನರ್ಹಗೊಳಿಸಬೇಕು ಎಂದು ಚುನಾವಣಾ ಆಯೋಗವನ್ನು ಆಡಳಿತಾರೂಢ ಎಐಎಡಿಎಂಕೆ ಆಗ್ರಹಿಸಿದೆ.

ಕೊಳತ್ತೂರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಸ್ಟಾಲಿನ್‌ ಅವರ ನಿಕಟವರ್ತಿಗಳು ಪ್ರತಿ ಮತದಾರರಿಗೆ ₹5 ಸಾವಿರ ನೀಡಿದ್ದಾರೆ ಎಂದು ಎಐಎಡಿಎಂಕೆ ವಕೀಲರ ವಿಭಾಗದ ಜಂಟಿ ಕಾರ್ಯದರ್ಶಿ ಆರ್‌.ಎಂ. ಬಾಬು ಮುರುಗವೇಲ್‌ ಅವರು ತಮಿಳುನಾಡು ಮುಖ್ಯ ಚುನಾವಣಾಧಿಕಾರಿ ಸತ್ಯವ್ರತ ಸಾಹೂ ಅವರಿಗೆ ದೂರು ನೀಡಿದ್ದಾರೆ. ಸ್ಟಾಲಿನ್‌ ಪರವಾಗಿ ಪ್ರಚಾರ ಮಾಡುವುದಕ್ಕೆ ಮತ್ತು ಅವರಿಗೆ ಮತ ಹಾಕುವುದಕ್ಕೆ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ತಲಾ ₹10 ಸಾವಿರ ನೀಡಲಾಗಿದೆ. ಪ್ರತಿ ಮತದಾರರಿಗೆ ಡಿಜಿಟಲ್‌ ಪಾವತಿ ಮೂಲಕ ₹5,000 ಪಾವತಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT