ADVERTISEMENT

ದಿಶಾ ಪಟಾನಿ ಮನೆ ಬಳಿ ಗುಂಡಿನ ದಾಳಿ: ಎನ್‌ಕೌಂಟರ್‌ನಲ್ಲಿ ಇಬ್ಬರ ಹತ್ಯೆ

ಪಿಟಿಐ
Published 17 ಸೆಪ್ಟೆಂಬರ್ 2025, 19:19 IST
Last Updated 17 ಸೆಪ್ಟೆಂಬರ್ 2025, 19:19 IST
<div class="paragraphs"><p>ದಿಶಾ ಪಟಾನಿ</p></div>

ದಿಶಾ ಪಟಾನಿ

   

ಲಖನೌ/ನವದೆಹಲಿ: ಉತ್ತರ ಪ್ರದೇಶದ ಬರೇಲಿಯಲ್ಲಿನ ಬಾಲಿವುಡ್‌ ನಟಿ ದಿಶಾ ಪಟಾನಿ ಅವರ ಮನೆಯ ಹೊರಗೆ ‌ಇತ್ತೀಚೆ‌ಗೆ ನಡೆದಿದ್ದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದರು ಎನ್ನಲಾದ ಇಬ್ಬರು ಆರೋಪಿಗಳು ಪೊಲೀಸರ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾರೆ.

ಹರಿಯಾಣದ ರೋಹ್ಟಕ್‌ ನಿವಾಸಿ ರವೀಂದರ್‌ ಮತ್ತು ಹರಿಯಾಣದ ಸೋನಿಪತ್‌ನ ಅರುಣ್‌ ಮೃತಪಟ್ಟವರು. ಅವರು‌ ರೋಹಿತ್‌ ಗೋದಾರ–ಗೋಲ್ಡಿ ಬ್ರಾರ್‌ನ ಗ್ಯಾಂಗ್‌ಸ್ಟರ್ ಗುಂಪಿನ ಸಕ್ರಿಯ ಸದಸ್ಯರು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.  

ADVERTISEMENT

ಗಾಜಿಯಾಬಾದ್‌ನ ಟ್ರೊನಿಕಾ ಸಿಟಿ ಬಳಿ ದೆಹಲಿ ಪೊಲೀಸ್‌ ವಿಶೇಷ ಘಟಕ, ಉತ್ತರ ಪ್ರದೇಶ ಮತ್ತು ಹರಿಯಾಣದ ವಿಶೇಷ ಕಾರ್ಯಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಈ ಎನ್‌ಕೌಂಟರ್‌ ನಡೆಸಿವೆ. ಕಾರ್ಯಾಚರಣೆಯಲ್ಲಿ ನಾಲ್ವರು ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.