ADVERTISEMENT

Cyclone Ditwah | ದಿತ್ವಾ ಅಬ್ಬರ: ತಮಿಳುನಾಡಿನಲ್ಲಿ ಮೂವರು ಸಾವು

ಪಿಟಿಐ
Published 30 ನವೆಂಬರ್ 2025, 18:08 IST
Last Updated 30 ನವೆಂಬರ್ 2025, 18:08 IST
   

ಚೆನ್ನೈ: ‘ದಿತ್ವಾ’ ಚಂಡಮಾರುತದಿಂದಾಗಿ ತಮಿಳುನಾಡಿದ ಹಲವು ಭಾಗಗಳಲ್ಲಿ ಮಳೆಯಾಗು
ತ್ತಿದ್ದು, ಅವಘಡಗಳಲ್ಲಿ ಮೂವರು ಮೃತ ಪಟ್ಟಿದ್ದಾರೆ. ಗೋಡೆ ಕುಸಿದು ಇಬ್ಬರು, ವಿದ್ಯುತ್‌ ಶಾರ್ಟ್‌ ಸರ್ಕೀಟ್‌ನಿಂದ ಒಬ್ಬರು ಮೃತಪಟ್ಟಿದ್ದಾರೆ.

‘ಭಾರಿ ಮಳೆಯಿಂದಾಗಿ 234 ಜೋಪಡಿಗಳಿಗೆ ಹಾನಿಯಾಗಿದೆ, 149 ಜಾನುವಾರುಗಳು ಮೃತಪಟ್ಟಿವೆ ಮತ್ತು ಡೆಲ್ಟಾ ಜಿಲ್ಲೆಗಳ (ನದಿ ಮುಖಜ ಭೂಮಿ) 57,000 ಹೆಕ್ಟೇರ್‌ ಕೃಷಿ ಜಮೀನುಗಳಿಗೆ ಹಾನಿಯಾಗಿದೆ’ ಎಂದು ಕಂದಾಯ ಮತ್ತು ವಿಪತ್ತು ನಿರ್ವಹಣೆ ಸಚಿವ ಕೆ.ಕೆ.ಎಸ್.ಎಸ್‌.ಆರ್‌ ರಾಮಚಂದ್ರನ್‌ ಅವರು ತಿಳಿಸಿದರು.

‘ನಾಗಪಟ್ಟಣಂನ 24,000 ಹೆಕ್ಟೇರ್‌, ತಿರುವರೂರ್‌ನ 15,000 ಹೆಕ್ಟೇರ್‌, ಮೈಲಾಡುಥುರೈನ 8,000 ಹೆಕ್ಟೇರ್‌ ಸೇರಿ ಒಟ್ಟು 57,000 ಹೆಕ್ಟೇರ್ ಕೃಷಿ ಜಮೀನುಗಳು ಹಾನಿಗೊಳಗಾಗಿವೆ’ ಎಂದರು.

ADVERTISEMENT

ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳ 28 ತಂಡಗಳು ರಕ್ಷಣಾ ಕಾರ್ಯಾಚರಣೆಗೆ ಸಿದ್ಧವಿವೆ.

ಗರಿಷ್ಠ ಮಳೆ:
ಈ ಮಧ್ಯೆ ಪುದುಚೇರಿಯ ಕಾರೈಕಲ್‌ನಲ್ಲಿ 24 ತಾಸಿನಲ್ಲಿ ಗರಿಷ್ಠ 19 ಸೆಂ.ಮೀ ಮಳೆಯಾಗಿದೆ, ಸೆಂಬನಾರ್‌ಕೊಯಿಲ್‌ನಲ್ಲಿ 17 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕೊಲಂಬೊ ತಲುಪಿದ ಸಿ–130ಜೆ
ಪ್ರವಾಹದಲ್ಲಿ ತತ್ತರಿಸಿರುವ ಶ್ರೀಲಂಕಾಕ್ಕೆ ನೆರವು ನೀಡಲು ‘ಆಪರೇಷನ್‌ ಸಾಗರ ಬಂಧು’ ಕಾರ್ಯಾಚರಣೆಯ ಭಾಗವಾಗಿ ನೆರವಿನ ಸಾಮಗ್ರಿ ಹೊತ್ತ ಸಿ–130ಜೆ ವಿಮಾನವನ್ನು ಭಾರತೀಯ ವಾಯುಪಡೆಯು ಶ್ರೀಲಂಕಾಕ್ಕೆ ಕಳುಹಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು. ತ್ವರಿತ ಪರಿಹಾರ ಕಾರ್ಯಾಚರಣೆಗಾಗಿ ಶ್ರೀಲಂಕಾ ರಾಜಧಾನಿಯಲ್ಲಿ ಎಂಐ 17 ಹೆಲಿಕಾಪ್ಟರ್‌ಗಳು ಸನ್ನದ್ಧ ಸ್ಥಿತಿಯಲ್ಲಿವೆ ಎಂದು ಅವರು ಹೇಳಿದರು. ‘ಕೊಲಂಬೊದಲ್ಲಿ ನಿಯೋಜಿತವಾಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ (ಎನ್‌ಡಿಆರ್‌ಎಫ್‌) ತಂಡಕ್ಕೆ ಅಗತ್ಯವಿರುವ ಸಾಧನಗಳನ್ನು ಹೊತ್ತೊಯ್ದ ವಿಮಾನವು ಭಾನುವಾರ ಅಲ್ಲಿಗೆ ತಲುಪಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಅತಂತ್ರರಾಗಿರುವ ಭಾರತೀಯರನ್ನು ಈ ವಿಮಾನದ ಮೂಲಕ ವಾಪಸ್‌ ಕರೆತರಲಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.