ADVERTISEMENT

Divorce | ಪತ್ನಿಗೆ ವಿಚ್ಛೇದನ ಕೊಟ್ಟು ಹಾಲಿನಲ್ಲಿ ಸ್ನಾನಮಾಡಿ ಸಂಭ್ರಮಿಸಿದ ಪತಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜುಲೈ 2025, 13:27 IST
Last Updated 13 ಜುಲೈ 2025, 13:27 IST
   

ಬೆಂಗಳೂರು: ವ್ಯಕ್ತಿಯೊಬ್ಬರು ಪತ್ನಿಗೆ ಕಾನೂನುಬದ್ಧವಾಗಿ ವಿಚ್ಛೇದನ ನೀಡಿದ ಬಳಿಕ ಹಾಲಿನಲ್ಲಿ ಸ್ನಾನ ಮಾಡಿ ಸಂಭ್ರಮಿಸಿರುವ ಘಟನೆ ವರದಿಯಾಗಿದೆ.

ವ್ಯಕ್ತಿಯೊಬ್ಬರು ಹಾಲಿನಲ್ಲಿ ಸ್ನಾನ ಮಾಡಿ ಸಂಭ್ರಮಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾ‍ಪಕವಾಗಿ ಹರಿದಾಡುತ್ತಿದೆ. 

ಅಸ್ಸಾಂ ರಾಜ್ಯದ ನಲ್ಬರಿ ಜಿಲ್ಲೆಯಿಂದ ಈ ಘಟನೆ ವರದಿಯಾಗಿದೆ. ಮಾಣಿಕ್ ಅಲಿ ಸುಮಾರು ನಲವತ್ತು ಲೀಟರ್‌ ಹಾಲಿನಿಂದ ಸ್ನಾನ ಮಾಡುವ ಮೂಲಕ ಪತ್ನಿಯಿಂದ ವಿಚ್ಛೇದನ ಸಿಕ್ಕಿದ್ದಕ್ಕಾಗಿ ಸಂಭ್ರಮಿಸಿದ್ದಾರೆ. ಹಾಗೂ ನಾನಿನ್ನೂ ಸ್ವತಂತ್ರ ಎಂದು ಎರಡು ಕೈ ಮೇಲೆತ್ತಿ ಕುಣಿದಾಡಿದ್ದಾರೆ.

ADVERTISEMENT

ನನ್ನ ಹೆಂಡತಿ ತನ್ನ ಪ್ರಿಯಕರನೊಂದಿಗೆ ಎರಡು ಸಲ ಓಡಿಹೋಗಿದ್ದಳು. ಆದರೂ ಮಗಳ ಭವಿಷ್ಯಕ್ಕಾಗಿ ಅವಳನ್ನು ಕ್ಷಮಿಸಿ ಮನೆಗೆ ಕರೆತಂದಿದ್ದೆ. ಅವಳು ಮೂರನೇ ಸಲ ಅದೇ ತಪ್ಪನ್ನು ಮಾಡಿದಳು ಹಾಗಾಗಿ ವಿಚ್ಛೇದನ ಮಾರ್ಗ ಆರಿಸಿಕೊಳ್ಳಬೇಕಾಯಿತು. ಮಗಳೂ ಆಕೆಯೊಂದಿಗೆ ಇರುವುದರಿಂದ ನನಗೆ ನೆಮ್ಮದಿ ಸಿಕ್ಕಂತಾಗಿದೆ. ವಿಚ್ಛೇದನದ ನಂತರ ಹೊಸ ಜೀವನ ಆರಂಭಿಸುತ್ತಿರುವೆ ಎಂದು ಮಾಣಿಕ್‌ ಅಲಿ ಹೇಳಿದ್ದಾರೆ.

ಮಾಣಿಕೆ ಅಲಿ ಹಾಲಿನಲ್ಲಿ ಸ್ನಾನ ಮಾಡುವ ವಿಡಿಯೊಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾವಿರಾರು ಕಮೆಂಟ್‌ಗಳು ಹರಿದುಬಂದಿವೆ. ಹಾಲನ್ನು ಈ ರೀತಿ ವ್ಯರ್ಥ ಮಾಡಬಾರದು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಹೊಸ ಜೀವ ಆರಂಭಮಾಡಿ ನಿಮಗೆ ಒಳ್ಳೆಯದಾಗಲಿ ಎಂದು ಮತ್ತೆ ಕೆಲವರು ಹೇಳಿದ್ದಾರೆ. ನಿಮ್ಮ ಹೆಂಡತಿ ಎಷ್ಟು ಕಾಟ ಕೊಟ್ಟಿದ್ದಾಳೆ ಮಾರಾಯ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.