ADVERTISEMENT

2021ರ ತಮಿಳುನಾಡು ಚುನಾವಣೆ: 75 ದಿನಗಳ ಅಭಿಯಾನ ಆರಂಭಿಸಿದ ಡಿಎಂಕೆ

ತಮಿಳುನಾಡು

ಪಿಟಿಐ
Published 20 ನವೆಂಬರ್ 2020, 14:14 IST
Last Updated 20 ನವೆಂಬರ್ 2020, 14:14 IST
ಉದಯನಿಧಿ ಸ್ಟಾಲಿನ್‌
ಉದಯನಿಧಿ ಸ್ಟಾಲಿನ್‌   

ತಿರುವರೂರು: 2021ರ ಚುನಾವಣೆಗೆ ಪೂರ್ವಭಾವಿಯಾಗಿ ಡಿಎಂಕೆಯ ಯುವ ಘಟಕ 75 ದಿನಗಳ ಅಭಿಯಾನವನ್ನು ಪ್ರಾರಂಭಿಸಿದೆ.

ಪಕ್ಷದ ಮುಖ್ಯಸ್ಥರಾಗಿದ್ದ ದಿವಂಗತ ಎಂ. ಕರುಣಾನಿಧಿ ಅವರ ಹುಟ್ಟೂರಾದ ತಿರುಕುವಲೈನಲ್ಲಿ ಈ ಅಭಿಯಾನಕ್ಕೆ ಯುವ ಘಟಕದ ಮುಖಂಡ ಉದಯನಿಧಿ ಸ್ಟಾಲಿನ್‌ ಚಾಲನೆ ನೀಡಿದರು.

ತಮಿಳುನಾಡಿನಲ್ಲಿ ಆವರಿಸಿರುವ ಕತ್ತಲೆಯನ್ನು ಕೊನೆಗಾಣಿಸುವ ಜೊತೆಗೆ ತಂದೆಯ ಸಂದೇಶವನ್ನು ರಾಜ್ಯದ ವಿವಿಧ ಭಾಗಗಳಿಗೆ ರವಾನಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ ಎಂದು ಉದಯನಿಧಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಮಹಿಳಾ ಮುಖಂಡರಾದ ಕನಿಮೊಳಿ, ಕೆ.ಪೊನ್ಮುಡಿ ಸೇರಿದಂತೆ 15 ಮುಖಂಡರು ರಾಜ್ಯದ ವಿವಿಧ ಭಾಗಗಳಿಗೆ ತೆರಳಿ ಆಡಳಿತಾರೂಢ ಪಕ್ಷದ ವೈಫಲ್ಯವನ್ನು ಜನರ ಮುಂದಿಡಲಿದ್ದಾರೆ. 1,500 ಸಭೆಗಳನ್ನು ನಡೆಸಲಿದ್ದಾರೆ ಎಂದು ಪಕ್ಷ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.