ADVERTISEMENT

ತಮಿಳುನಾಡಿನಲ್ಲಿ ಬಿಜೆಪಿ ಪಾದಯಾತ್ರೆ: ಡಿಎಂಕೆ ಲೇವಡಿ

ಪಿಟಿಐ
Published 22 ಜನವರಿ 2023, 9:48 IST
Last Updated 22 ಜನವರಿ 2023, 9:48 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಚೆನ್ನೈ: ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಬರುವ ಏಪ್ರಿಲ್‌ನಲ್ಲಿ ರಾಜ್ಯದಾದ್ಯಂತ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ. ಈ ಯಾತ್ರೆಯನ್ನು ಆಡಳಿತಾರೂಢ ಡಿಎಂಕೆ ಪಕ್ಷ ಲೇವಡಿ ಮಾಡಿದೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಯಾತ್ರೆಯು ಕೇಸರಿ ನಾಯಕನ ಮೇಲೆ ಪರಿಣಾಮ ಬೀರಿದೆ ಎಂದು ಮೂದಲಿಸಿದೆ.

ಡಿಎಂಕೆ ಪಕ್ಷದ ಮುಖವಾಣಿ ‘ಮುರಸೋಲಿ‘ಯಲ್ಲಿ ಅಣ್ಣಾಮಲೈ ಪಾದಯಾತ್ರೆ ಮಾಡುತ್ತಿರುವುದನ್ನು ಪ್ರಸ್ತಾಪ ಮಾಡಿದೆ. ತಮಿಳಿನ ಹಳೆಯ ಪದ್ಯವನ್ನು ಉಲ್ಲೇಖಿಸಿ ಪಾದಯಾತ್ರೆ ಮಾಡುತ್ತಿರುವುದರ ಬಗ್ಗೆ ಲೇವಡಿ ಮಾಡಿದೆ. ರಾಹುಲ್‌ ಗಾಂಧಿ ಅವರ ಯಾತ್ರೆ ಕೇಸರಿ ನಾಯಕನ ಮೇಲೆ ಪರಿಣಾಮ ಬೀರಿದೆ ಎಂದು ಮುರಸೋಲಿಯಲ್ಲಿ ಬರೆಯಾಗಿದೆ.

ADVERTISEMENT

ದಕ್ಷಿಣ ತಮಿಳುನಾಡಿನ ಕಡಲ ತೀರದ ದೇವಾಲಯ ಪಟ್ಟಣ ತಿರುಚೆಂಡೂರಿನಿಂದ ಏಪ್ರಿಲ್ 14ರಿಂದ ಬಿಜೆಪಿ ಪಾದಯಾತ್ರೆ ಆರಂಭವಾಗಲಿದೆ. ಈ ಪಾದಯಾತ್ರೆ ಎಲ್ಲಾ 234 ವಿಧಾನಸಭೆ ಕ್ಷೇತ್ರಗಳಿಗೂ ತಲುಪಲಿದೆ.

ಏಪ್ರಿಲ್‌ 14 ಅಂಬೇಡ್ಕರ್‌ ಜಯಂತಿ ಹಾಗೂ ತಮಿಳು ಹೊಸ ವರ್ಷದ ದಿನ ಆಗಿರುವುದರಿಂದ ಬಿಜೆಪಿ ಪಾದಯಾತ್ರೆಗೆ ಇದೇ ದಿನವನ್ನು ಆಯ್ಕೆ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.