ADVERTISEMENT

ಸ್ಟಾಲಿನ್‌ ಪುತ್ರಿ ಮನೆ ಮೇಲಿನ ಐಟಿ ದಾಳಿ ಹಿಂದೆ ರಾಜಕೀಯ ಉದ್ದೇಶ: ಡಿಎಂಕೆ ಆರೋಪ

ಪಿಟಿಐ
Published 2 ಏಪ್ರಿಲ್ 2021, 8:35 IST
Last Updated 2 ಏಪ್ರಿಲ್ 2021, 8:35 IST
ದುರೈಮುರುಗನ್‌
ದುರೈಮುರುಗನ್‌   

ವೆಲ್ಲೂರು (ತಮಿಳುನಾಡು): ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಪುತ್ರಿ ಸೆಂಥಮರೈ ಅವರ ಚೆನ್ನೈ ನಿವಾಸದ ಮೇಲೆ ಕೇಂದ್ರ ಆದಾಯ ತೆರಿಗೆ ಅಧಿಕಾರಿಗಳು ನಡೆಸಿರುವ ದಾಳಿಯನ್ನು ಡಿಎಂಕೆ ‌ಖಂಡಿಸಿದೆ. ‘ಇದೊಂದು ರಾಜಕೀಯ ಉದ್ದೇಶದ ದಾಳಿ‘ ಎಂದು ಆರೋಪಿಸಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ದುರೈಮುರುಗನ್, ‘ಚುನಾವಣಾ ಪ್ರಚಾರ ಪೂರ್ಣಗೊಳಿಸಿ, ಮತದಾನಕ್ಕೆ ಸಜ್ಜಾಗುತ್ತಿರುವ ಈ ಸಮಯದಲ್ಲಿ ಪಕ್ಷದ ಮುಖಂಡರ ನಿವಾಸದ ಮೇಲೆ ನಡೆದಿರುವ ಈ ದಾಳಿಯ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ದೂರಿದರು.

‘ಚುನಾವಣೆ ವೇಳೆ ಇಂಥ ದಾಳಿ ನಡೆಸಿದರೆ ಸ್ಟಾಲಿನ್ ಮತ್ತು ಅವರ ಕುಟುಂಬ ಹಾಗೂ ಪಕ್ಷದ ಶಕ್ತಿ ಕುಗ್ಗಿಸಬಹುದು ಎಂದು ಕೇಂದ್ರ ಸರ್ಕಾರ ತಪ್ಪು ಲೆಕ್ಕಾಚಾರ ಮಾಡಿದೆ ಎಂದು ಆರೋಪಿಸಿದ ಮುರುಗನ್‌, ‘ಡಿಎಂಕೆ ಇಂಥ ಯಾವುದೇ ಶೋಧಗಳಿಗೂ ಹೆದರುವಂತಹ ಪಕ್ಷವಲ್ಲ. ಇಂಥ ಅನೇಕ ರೀತಿಯ ಘಟನೆಗಳನ್ನು ಈಗಾಗಲೇ ಪಕ್ಷ ಎದುರಿಸಿದೆ. ಇದರಿಂದ ಪಕ್ಷಕ್ಕೆ ಯಾವುದೇ ರೀತಿ ಹಿನ್ನಡೆಯಾಗುವುದಿಲ್ಲ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಆದರೆ ಆದಾಯ ತೆರಿಗೆ ಅಧಿಕಾರಿಗಳು ದಾಳಿಯನ್ನು ಖಚಿತಪಡಿಸುತ್ತಿಲ್ಲ, ನಿರಾಕರಿಸುತ್ತಲೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.