ನವಾದಾ (ಬಿಹಾರ): ಬಿಹಾರದ ಪಟ್ನಾದ ಕುಖ್ಯಾತ ‘ಡಾಗ್ ಬಾಬು’ ಪ್ರಕರಣದ ನಂತರ, ರಾಜ್ಯದ ನವಾದಾ ಜಿಲ್ಲೆಯಲ್ಲಿ ಮತ್ತೊಂದು ನಾಯಿಯ ಹೆಸರಿನಲ್ಲಿ ವಾಸಸ್ಥಾನ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ರವಿ ಪ್ರಕಾಶ್ ಅವರು ‘ಡಾಗೇಶ್ ಬಾಬು’ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.
‘ಕಾಪಿ ಕ್ಯಾಟ್‌ಗಳು...ಅಥವಾ ಕಾಪಿ ನಾಯಿಗಳು ಎಂದು ಹೇಳಬಹುದು. ರಜೌಲಿಯ ಸಿರ್ದಲಾದಿಂದ ವಾಸಸ್ಥಾನ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಲು ಯತ್ನಿಸಲಾಗಿದೆ. ಕೃತ್ಯವನ್ನು ನಾವು ಕಂಡುಹಿಡಿದಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದೆ’ ಎಂದು ಪ್ರಕಾಶ್ ಅವರು ‘ಎಕ್ಸ್’ನಲ್ಲಿ ಬರೆದಿದ್ದು, ಅರ್ಜಿಯ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ.
ಜುಲೈ 29ಕ್ಕೆ ಸಲ್ಲಿಸಲಾದ ಅರ್ಜಿಯಲ್ಲಿ ತುಪ್ಪಳವಿರುವ ನಾಯಿಯ ಚಿತ್ರವಿದ್ದು, ಪೋಷಕರ ಹೆಸರನ್ನು ‘ಡಾಗೇಶ್ ಕೆ ಪಾಪ’ ಮತ್ತು ‘ಡಾಗೇಶ್ ಕಿ ಮಮ್ಮಿ’ ಎಂದು ಬರೆಯಲಾಗಿದೆ.
ಬಿಹಾರದಲ್ಲಿ ವಾರದಲ್ಲಿ ನಡೆಯುತ್ತಿರುವ ಈ ರೀತಿಯ ಮೂರನೇ ಪ್ರಕರಣ ಇದಾಗಿದೆ. ಈ ಹಿಂದೆ ‘ಡಾಗ್ ಬಾಬು’ ಮತ್ತು ‘ಸೋನಾಲಿಕಾ ಟ್ರ್ಯಾಕ್ಟರ್’ ಹೆಸರಿನಲ್ಲಿ ಅರ್ಜಿಗಳನ್ನು ಸಲ್ಲಿಕೆಯಾಗಿದ್ದವು. ಎಲ್ಲಾ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸೈಬರ್ ತಂತ್ರಜ್ಞರ ಸಹಾಯದೊಂದಿಗೆ ಅವರನ್ನು ಪತ್ತೆ ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.