ADVERTISEMENT

ದೇಶಿಯ ವಿಮಾನ ಪ್ರಯಾಣ ದರಗಳ ಮೇಲಿನ ಮಿತಿ ಆ.31ರಿಂದ ರದ್ದು

ಪಿಟಿಐ
Published 10 ಆಗಸ್ಟ್ 2022, 14:21 IST
Last Updated 10 ಆಗಸ್ಟ್ 2022, 14:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶೀಯ ವಿಮಾನ ಪ್ರಯಾಣ ದರಗಳ ಮೇಲೆ ಹೇರಲಾಗಿದ್ದ ಮಿತಿಯನ್ನು ಆಗಸ್ಟ್‌ 31ರಿಂದ ತೆಗೆದು ಹಾಕಲಾಗುವುದು ಎಂದು ಕೇಂದ್ರ ವಿಮಾನಯಾನ ಸಚಿವಾಲಯ ಬುಧವಾರ ಹೇಳಿದೆ.

‘ವಿಮಾನ ಇಂಧನಕ್ಕೆ (ಎಟಿಎಫ್‌) ಇರುವ ದೈನಂದಿನ ಬೇಡಿಕೆ ಹಾಗೂ ದರಗಳ ವಿಶ್ಲೇಷಣೆ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ’ ಎಂದು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಟ್ವೀಟ್‌ ಮಾಡಿದ್ದಾರೆ.

ಕೋವಿಡ್‌ ಪಿಡುಗಿನ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ಅನ್ನು 2020ರ ಮೇ 25ರಂದು ತೆರವು ಮಾಡಲಾಗಿತ್ತು. ದೇಶೀಯ ವಿಮಾನಗಳ ಹಾರಾಟಕ್ಕೂ ಚಾಲನೆ ನೀಡಲಾಗಿತ್ತಲ್ಲದೇ ಪ್ರಯಾಣದ ಅವಧಿಯ ಆಧಾರದಲ್ಲಿ ದರಗಳ ಮೇಲೆ ಮಿತಿ ಹೇರಲಾಗಿತ್ತು. ಈಗ ಎರಡು ವರ್ಷಗಳ ನಂತರ ಈ ಮಿತಿಯನ್ನು ತೆಗೆದು ಹಾಕಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.