ಬಾಬಾ ರಾಮ್‌ದೇವ್
–ಪಿಟಿಐ ಚಿತ್ರ
ಮುಂಬೈ: ‘ಬಡ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಸುಂಕ ಭಯೋತ್ಪಾದನೆ’ ಹಾಗೂ ‘ಆರ್ಥಿಕ ಭಯೋತ್ಪಾದನೆ’ ನಡೆಸುತ್ತಿದ್ದಾರೆ’ ಎಂದು ಯೋಗಗುರು ಬಾಬಾ ರಾಮ್‌ದೇವ್ ಕಿಡಿಕಾರಿದ್ದಾರೆ.
ನಾಗಪುರದಲ್ಲಿ ಪತಂಜಲಿ ಫುಡ್, ಹರ್ಬಲ್ ಪಾರ್ಕ್ ಉದ್ಘಾಟಿಸಿ ಮಾತನಾಡಿದ ಅವರು, ‘ದುರ್ಬಲ ರಾಷ್ಟ್ರ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮೇಲೆ ಟ್ರಂಪ್ ಒತ್ತಡ ಸೃಷ್ಟಿಸುತ್ತಿದ್ದಾರೆ’ ಎಂದು ದೂರಿದರು.
‘ಪತಂಜಲಿಯ ಹೊಸ ಫುಡ್ ಪಾರ್ಕ್‌ನಿಂದ ವಿದರ್ಭಾ ಪ್ರಾಂತ್ಯದ ಚಿತ್ರಣವೇ ಬದಲಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.